ಕೆಲವೊಮ್ಮೆ ಹಣ್ಣು ಕತ್ತರಿಸಿ ತಿನ್ನಲಾಗದೇ ಹಾಗೆ ಉಳಿದುಬಿಡುತ್ತದೆ. ಹೀಗೆ ಕತ್ತರಿಸಿದ ಹಣ್ಣು ಹಾಗೆಯೆ ಬಿಟ್ಟರೆ ಅದು ಒಣಗಿದಂತಾಗಿ ಕಂದು ಬಣ್ಣಕ್ಕೆ ಬರುತ್ತದೆ. ಆದರೆ ಕತ್ತರಿಸಿದ ಹಣ್ಣಿನಲ್ಲಿ ತಾಜಾತನ ಉಳಿಯಬೇಕೆಂದರೆ ಈ ಕೆಲ ಟಿಪ್ಸ್ ಫಾಲೋ ಮಾಡಿ. ಹಣ್ಣಿನಲ್ಲಿನ ತಾಜಾತನ ಹಾಗೆಯೇ ಇರುತ್ತದೆ.
ಹಣ್ಣುಗಳನ್ನು ಕತ್ತರಿಸಿದ ತಕ್ಷಣ ತಣ್ಣೀರಿನಿಂದ ತೊಳೆಯಿರಿ. ಈ ಮೂಕಲ ಗಾಳಿಯಲ್ಲಿನ ಕಿಣ್ವಗಳ ಪ್ರಮಾಣ ಕಡಿಮೆಯಾಗಬಹುದು. ಇದರಿಂದ ಹೆಚ್ಚು ಹೊತ್ತು ಹಣ್ಣುಗಳು ತಾಜಾತನದಿಂದ ಇರುತ್ತವೆ.
ಹಣ್ಣು ಅಷ್ಟೆ ಅಲ್ಲದೇ ಕತ್ತರಿಸಿ ಉಳಿದ ತರಕಾರಿಗಳನ್ನು ಸಹ ಉಪ್ಪು ನೀರಿನಲ್ಲಿ ತೊಳೆಯಿರಿ. ಇಲ್ಲದಿದ್ದರೆ ಉಪ್ಪು ನೀರಿನಲ್ಲಿ ನೆನಸಿಟ್ಟರೂ ಪರವಾಗಿಲ್ಲ. ಹೆಚ್ಚು ಉಪ್ಪು ಮಿಶ್ರಿತ ನೀರಿನಲ್ಲಿ ಹಣ್ಣುಗಳನ್ನು ನೆನಸಿಟ್ಟರೆ ಹಣ್ಣಿನ ರುಚಿ ಬದಲಾಗಬಹುದು. ಹಾಗಾಗಿ ಉಪ್ಪಿನ ಪ್ರಮಾಣ ನೋಡಿಕೊಂಡು ಹಾಕಿ.
ಕತ್ತರಿಸಿದ ಹಣ್ಣಿಗೆ ತೆಳುವಾಗಿ ಜೇನುತುಪ್ಪ ಸವರಿ. ಅಥವಾ ನೀರಿಗೆ ಒಂದು ಚಮಚ ಜೇನುತುಪ್ಪ ಹಾಕಿ. ಆ ಜೇನುತುಪ್ಪ ಮಿಶ್ರಿತ ನೀರಿಗೆ ಹಣ್ಣುಗಳನ್ನು ಹಾಕಿಡಿ. ಈ ಮೂಲಕ ಹಣ್ಣುಗಳು ಬಣ್ಣಗೆಡುವುದಿಲ್ಲ
ಸಿಟ್ರಿಕ್ ಅಂಶವಿರುವ ಹಣ್ಣುಗಳ ಹುಳಿಯನ್ನು ಕತ್ತರಿಸಿದ ಹಣ್ಣುಗಳಿಗೆ ಸವರಿ. ನಿಂಬೆ ಕಿತ್ತಳೆ ರಸವನ್ನು ಕತ್ತರಿಸಿದ ಸೇಬು, ಪೇರಳೆ, ಪಪ್ಪಾಯ ಹಣ್ಣುಗಳಿಗೆ ತೆಳುವಾಗಿ ಸವರಿದ್ರೆ ಹಣ್ಣು ಹೆಚ್ಚು ಕಾಲ ತಾಜಾತನದಿಂದ ಇರುತ್ತದೆ.
ಜಿಂಜರ್ ಆಲೆ ಅಂದರೆ ಶುಂಠಿಯ ಪಾನೀಯದಲ್ಲಿ ಹಣ್ಣುಗಳನ್ನು ಅದ್ದಿಡಿ. ಹೀಗೆ ಮಾಡಿದರೆ ಹಣ್ಣಿನಲ್ಲಿನ ತಾಜಾತನ ಹಾಗೆಯೇ ಉಳಿಯುತ್ತದೆ ಹಾಗು ಅಣ್ಣಿನ ಕುರುಕು ಗುಣವನ್ನು ಹೆಚ್ಚು ಹೊತ್ತು ಇರುವಂತೆ ಮಾಡುತ್ತದೆ.