ವರ್ಕ್ ಫ್ರಂಮ್ ಹೋಮ್ ಚಾಲ್ತಿಯಲ್ಲಿದೆ. ಹೊರಗಡೆ ಎಲ್ಲಿಯೂ ಹೋಗದೇ ಮನೆಯಲ್ಲಿಯೇ ಕುಳಿತು ಕೆಲಸ ಮಾಡೋರಿಗೆ ಬೆನ್ನು ನೋವು ಖಾಯಂ ಆಗಿಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ಸರಿಯಾದ ಭಂಗಿಯಲ್ಲಿ ಕುಳಿತು ಕೆಲಸ ಮಾಡದೇ ಇರುವುದು.
ಹೀಗೆ ಬೆನ್ನು ನೋವಿನಿಂದ ಬಳಲುತ್ತಿರುವವರು ಈ ಎರಡು ಯೋಗಾಸನಗಳನ್ನು ನಿತ್ಯವೂ ಮಾಡಿದರೆ ಶಾಶ್ವತವಾಗಿ ಆ ಸಮಸ್ಯೆಯಿಂದ ದೂರವಿರುತ್ತೀರಿ.
ಕೋಬ್ರಾಭಂಗಿ: ಈ ಯೋಗಾಸನ ಭುಜ, ಎದೆ ಹಾಗು ಹೊಟ್ಟೆಗೆ ಉತ್ತಮ ಎಕ್ಸಸೈಸ್ ಆಗಿದೆ. ಇದು ಬೆನ್ನು ಮೂಳೆಗಳಿಗೆ ಶಕ್ತಿ ನೀಡುತ್ತದೆ. ಬೆನ್ನು ಮೂಳೆಯಲ್ಲಿನ ಜಡತ್ವವನ್ನು ಹೋಗಲಾಡಿಸುತ್ತದೆ. ಒಟ್ಟಾರೆ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ. ಇದನ್ನು ಹೇಗೆ ಮಾಡಬೇಕೆಂದರೆ,
ಹೊಟ್ಟೆ ಮೇಲೆ ಮಾಡಿ ಮಲಗಿ.
ಭುಜದ ಕೆಳಭಾಗದಲ್ಲಿ ಕೈಗಳನ್ನು ಇಡಿ. ಕೈ ಬೆರಳುಗಳು ಮುಂದಕ್ಕೆ ಚಾಚಿ.
ಕೈಗಳನ್ನು ನೆಲಕ್ಕೆ ಒತ್ತುತ್ತಾ ನಿಧಾನವಾಗಿ ತಲೆ ಎತ್ತಿ, ಜೊತೆಗೆ ಎದೆ ಹಾಗು ಭುಜವನ್ನೂ ಎತ್ತುತ್ತಾ ನಿಧಾನವಾಗಿ ಉಸಿರಾಡಿ.
ಉಸಿರನ್ನು ಬಿಡುತ್ತಾ ಮತ್ತೆ ನೆಲದ ಮೇಲೆ ನಿಧಾನವಾಗಿ ಮಲಗಿ
ಕೈಗಳನ್ನು ಹಾಗೆ ದೇಹದ ಬದಿಯಲ್ಲಿ ಇಡಿ. ಈಗ ತಲೆಗೆ ಆರಾಮ ನೀಡಿ.
ಈಗ ಸೊಂಟವನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಬದಲಾಯಿಸಿ.
ಹೀಗೆ ಮಾಡಿದರೆ ಬೆನ್ನಿನ ಭಾಗದಲ್ಲಿರುವ ಒತ್ತಡ ಕಡಿಮೆಯಾಗುತ್ತದೆ.
ಮಾರ್ಜಾಲ ಗೋ ಆಸನ: ಈ ಯೋಗಾಸನ ಮಾಡಿದರೆ ಭುಜ, ಕುತ್ತಿಗೆ, ಬೆನ್ನುಹುರಿ ಭಾಗದಲ್ಲಿನ ಸ್ನಾಯುಗಳು ಸಡಿಲಗೊಂಡು ಆ ಭಾಗ ನೋವನ್ನು ಕ್ರಮೇಣವಾಗಿ ನಿವಾರಣೆ ಮಾಡುತ್ತವೆ.
ಮಾಡುವ ವಿಧಾನ:
ನೆಲದ ಮೇಲೆ ಮೊಣಕಾಲು, ಅಂಗೈಯಿಂದ ನಿಂತುಕೊಳ್ಳಿ. ಮಣಿಕಟ್ಟು ಭುಜದ ಕೆಳಗೆ ಹಾಗು ಮೊಣಕಾಲು ಸೊಂಟದ ಕೆಳಗೆ ಇರಲಿ.
ತಲೆಯನ್ನು ಎತ್ತುತ್ತಾ ಉಸಿರಾಟ ಮಾಡುತ್ತಾ ಹೊಟ್ಟೆಯ ಭಾಗವನ್ನು ಕೆಳಗೆ ತನ್ನಿ.
ಮುಖವನ್ನು ಕೆಳಗೆ ಮಾಡುತ್ತಾ ಉಸಿರನ್ನು ಬಿಡಿ. ಈಗ ಗಲ್ಲ ಎದೆಯ ಭಾಗದಲ್ಲಿರಲಿ. ಬೆನ್ನು ಹುರಿಯನ್ನು ಬಿಲ್ಲಿನ ಆಕಾರಕ್ಕೆ ತನ್ನಿ.