ಘಾಜಿಯಾಬಾದ್ : ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯ ಎಂದೆನ್ನುತ್ತಾರೆ. ಭಾರತ ದೇಶದಲ್ಲಿ ಮದುವೆ ಸಮಾರಂಭವನ್ನು ಡಿಜೆ, ಬ್ಯಾಂಡ್ ಬಳಸುವ ಮೂಲಕ ಅದ್ದೂರಿಯಾಗಿ ನಡೆಸಲಾಗುತ್ತದೆ. ಆದರೆ ಇನ್ಮುಂದೆ ಮುಸ್ಲಿಂ ವಿವಾಹ ಸಮಾರಂಭದಲ್ಲಿ ಡಿಜೆ ಸಂಗೀತ ಅಥವಾ ಬ್ಯಾಂಡ್ ನುಡಿಸಿದರೆ ‘ನಿಖಾ’ (ಮುಸ್ಲಿಂ ವಿವಾಹ ಸಮಾರಂಭ) ಮಾಡಬೇಡಿ ಎಂದು ಉತ್ತರ ಪ್ರದೇಶದ ಮುಸ್ಲಿಂ ಮಹಾ ಸಭಾ ಧರ್ಮಗುರುಗಳಿಗೆ ಘಾಜಿಯಾಬಾದ್ ಮುಸ್ಲಿಂ ಸಂಘಟನೆ ಎಚ್ಚರಿಕೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ
Job Alert: ‘310 ಪ್ರಾಂಶುಪಾಲ’ರ ಹುದ್ದೆಗೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ
ವಿವಾಹ ಸಮಾರಂಭಗಳನ್ನು ಸರಳವಾಗಿ ನಡೆಸಲು ಸಮುದಾಯಗಳನ್ನು ಮನವೊಲಿಸಲು ಧರ್ಮಗುರುಗಳ ಸಹಕಾರವನ್ನು ಕೋರಿ ಸಂಸ್ಥೆ ಹೇಳಿಕೆ ನೀಡಿದೆ. ಮದುವೆ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಖರ್ಚು ಮಾಡುವುದನ್ನು ಸಂಸ್ಥೆ ವಿರೋಧಿಸುವುದನ್ನು ಮುಂದುವರಿಸಲಿದೆ ಎಂದು ಈ ಪಿಟಿಐ ಹೇಳಿಕೆ ನೀಡಿದೆ. ಭವಿಷ್ಯದಲ್ಲಿ ಡಿಜೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ಲಿಖಿತ ಭರವಸೆಯನ್ನು ಕುಟುಂಬಗಳಿಂದ ತೆಗೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Job Alert: ‘310 ಪ್ರಾಂಶುಪಾಲ’ರ ಹುದ್ದೆಗೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ
ಜಾರ್ಖಂಡ್ನ ಧನ್ಬಾದ್ ಜಿಲ್ಲೆಯ ಮುಸ್ಲಿಂ ಧರ್ಮಗುರುಗಳ ಗುಂಪು ನೃತ್ಯ, ಜೋರಾಗಿ ಸಂಗೀತ ನುಡಿಸುವುದು ಮತ್ತು ಮದುವೆಯ ಸಮಯದಲ್ಲಿ ಪಟಾಕಿ ಸಿಡಿಸುವಂತಹ ಮುಸ್ಲೀಮೇತರ ಆಚರಣೆಗಳನ್ನು ನಿಷೇಧಿಸಿದೆ. ಜೊತೆಗೆ ಆದೇಶವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದೆ. “ಇಸ್ಲಾಂನಲ್ಲಿ ಇಂತಹ ಆಚರಣೆಗಳಿಗೆ ಅನುಮತಿ ಇಲ್ಲ, ಇದು ಜನರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ” ಎಂದು ಸಿಬಿಲಿಬಾಡಿ ಜಾಮಾ ಮಸೀದಿಯ ಹೆಡ್ ಇಮಾಮ್ ಮೌಲಾನಾ ಮಸೂದ್ ಅಖ್ತರ್ ತಿಳಿಸಿದ್ದಾರೆ
Job Alert: ‘310 ಪ್ರಾಂಶುಪಾಲ’ರ ಹುದ್ದೆಗೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ