ಬೆಂಗಳೂರು : ಅಮೆರಿಕ ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಸಂಪೂರ್ಣ ವ್ಯತ್ಯಯ ಆಗಿದ್ದು ಅಲ್ಲದೆ ಸಿಲಿಂಡರ್ಗಳ ದರದಲ್ಲಿ ಭಾರಿ ಏರಿಕೆಯಾಗಿದೆ. ಈ ಹಿನ್ನಲೆ LPG ಸಿಲಿಂಡರ್ ಸರಬರಾಜು ಸಂಸ್ಥೆಗಳಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಅನಗತ್ಯವಾಗಿ ಹೆಚ್ಚುವರಿ ಸಿಲಿಂಡರ್ ಬುಕ್ ಮಾಡಬೇಡಿ, 1 ಸಿಲಿಂಡರ್ ಇರುವವರು 21 ದಿನಗಳ ನಂತರ ಬುಕ್ ಮಾಡಬೇಕು. 2 ಸಿಲಿಂಡರ್ ಇರುವವರು 30 ದಿನಗಳ ನಂತರ ಬುಕ್ ಮಾಡಬೇಕು. ಅದೇ ರೀತಿಯಾಗಿ ಉಜ್ವಲ ಯೋಜನೆ ಗ್ರಾಹಕರು 30 ದಿನದ ನಂತರ ಬುಕ್ ಮಾಡಬೇಕು. ಹೊಸ ಸಂಪರ್ಕದಾರರಿಗೆ ಒಂದು ಸಿಲಿಂಡರ್ ಕನೆಕ್ಷನ್ ನೀಡಲಾಗುತ್ತದೆ ಎಂದು ಸಿಲಿಂಡರ್ ಸರಬರಾಜು ಕಂಪನಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿವೆ.








