ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆರೋಗ್ಯವು ಉತ್ತಮವಾಗಿರಬೇಕಾದರೆ ಸರಿಯಾದ ಆಹಾರಗಳನ್ನು ಸೇವನೆ ಮಾಡುವುದು ಅಗತ್ಯವಾಗಿದೆ. ಕೆಲವೊಮ್ಮೆ ಆಹಾರಗಳನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದು ಅಪಾಯಕಾರಿಯಾಗಿದೆ. ಅದರಲ್ಲೂ ಮೊಟ್ಟೆ ಜೊತೆ ಈ ಆಹಾರಗಳನ್ನು ಸೇವಿದ್ರೆ ಹೊಟ್ಟೆ ಹಾಳಾಗೋದು ಗ್ಯಾರೆಂಟಿ.
ವಿಶೇಷವಾಗಿ ಆಹಾರದ ತಪ್ಪು ಸಂಯೋಜನೆಯು ಆಯಾಸ, ವಾಕರಿಕೆ ಮತ್ತು ಕರುಳಿನ ಕಾಯಿಲೆಗಳಂತಹ ನಿರಂತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸರಿಯಾದ ಆಹಾರ ಮಿಶ್ರಣ ಮತ್ತು ಸರಿಯಾದ ಊಟದ ಸಮಯ ಬಹಳ ಮುಖ್ಯ.ವಾಗಿದೆ.
ಮೊಟ್ಟೆಯಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳು ಸಮೃದ್ಧವಾಗಿವೆ. ಮೊಟ್ಟೆಯಲ್ಲಿ ಕಾರ್ಬೋಹೈಡ್ರೇಟ್ಗಳು ಕಡಿಮೆ. ಮತ್ತು ನಮಗೆ ಇಷ್ಟವಾದ ಆಹಾರ ಪದಾರ್ಥ ತಿನ್ನಬಹುದು. ಆದರೆ ಕೆಲವು ಆಹಾರಗಳೊಂದಿಗೆ ಇದನ್ನು ತಿನ್ನುವುದು ತಪ್ಪು. ಇದು ನಿಮಗೆ ಅನಗತ್ಯ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.
ಮಾಂಸ
ಅನೇಕ ಜನರು ಮೊಟ್ಟೆಗಳೊಂದಿಗೆ ಮಾಂಸವನ್ನು ತಿನ್ನುತ್ತಾರೆ. ಅವುಗಳನ್ನು ಒಟ್ಟಿಗೆ ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಮಿಕ್ಸ್ ನಿಮಗೆ ಆಲಸ್ಯವನ್ನುಂಟು ಮಾಡುತ್ತದೆ. ಏಕೆಂದರೆ ಮೊಟ್ಟೆ ಮತ್ತು ಮಾಂಸ ಎರಡರಲ್ಲೂ ಪ್ರೋಟೀನ್ ಅಧಿಕವಾಗಿರುತ್ತದೆ. ಅಲ್ಲದೆ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಹೊಟ್ಟೆಯ ಸಮಸ್ಯೆಗಳು ಸಹ ಸಂಭವಿಸುತ್ತವೆ.
ಸಕ್ಕರೆ
ಎಂದಿಗೂ ಮೊಟ್ಟೆ ಸೇವನೆ ಮಾಡಿದಾಗ ಮರೆತು ಸಕ್ಕರೆಯನ್ನು ತಿನ್ನಬಾರದು. ಇವೆರಡು ಒಟ್ಟಿಗೆ ಸೇರಿಸಿದಾಗ, ಅಮೈನೋ ಆಮ್ಲವು ಅಧಿಕವಾಗಿ ಬಿಡುಗಡೆಯಾಗುತ್ತದೆ. ಇದು ಮಾನವ ದೇಹಕ್ಕೆ ವಿಷಕಾರಿಯಾಗುತ್ತದೆ. ಏಕೆಂದರೆ ಇದು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ.
ಸೋಯಾ ಹಾಲು
ಸೋಯಾ ಹಾಲು ಮತ್ತು ಮೊಟ್ಟೆಗಳ ಸಂಯೋಜನೆಯು ಪ್ರೋಟೀನ್ ದೇಹವನ್ನು ಹೀರಿಕೊಳ್ಳುವಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಈ ಆಹಾರ ಸಂಯೋಜನೆಯನ್ನು ತಪ್ಪಿಸಬೇಕು.
ಚಹಾ
ಅನೇಕ ಜನರು ಚಹಾದ ಜೊತೆ ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದು ಹೆಚ್ಚು ಹಾನಿಕಾರಕ ಎಂಬುದು ಮರೆಯಬಾರದು. ಈ ಆಹಾರಗಳನ್ನು ಮಿಕ್ಸ್ ಮಾಡಿ ತಿನ್ನುವುದು ಮಲಬದ್ಧತೆ ಮತ್ತು ದೇಹದ ಅಂಗಗಳ ಹಾನಿಗೆ ಕಾರಣವಾಗಬಹುದು.
ಬಾಳೆಹಣ್ಣು
ಬಾಳೆಹಣ್ಣು ತಿಂದ ನಂತರ ಮೊಟ್ಟೆ ತಿನ್ನುವುದನ್ನು ತಪ್ಪಿಸುವುದು ಉತ್ತಮ. ಬಾಳೆಹಣ್ಣು ಮತ್ತು ಮೊಟ್ಟೆಯ ಮಿಕ್ಸ್ ದೇಹಕ್ಕೆ ಹಾನಿಕಾರಕವ. ಅದರಲ್ಲೂ ಜಿಮ್ ಗೆ ಹೋಗುವವರು ಮತ್ತು ಡಯಟ್ ಮಾಡುವವರು ಇದನ್ನು ಪಾಲಿಸಬೇಕು.
BIG BREAKING NEWS: ಕೂಡಲೇ ಉಕ್ರೇನ್ ತೊರೆಯಿರಿ: ಭಾರತೀಯ ನಾಗರೀಕರಿಗೆ ಉಕ್ರೇನಿಯಾ ರಾಯಭಾರ ಕಚೇರಿಯಿಂದ ಆದೇಶ