ನವದೆಹಲಿ : ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪಕ್ಷ ಡಿಎಂಕೆ ತನ್ನ ಮಿತ್ರ ಪಕ್ಷ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಒಪ್ಪಂದವನ್ನ ಅಂತಿಮಗೊಳಿಸಿದೆ. ಪಕ್ಷವು ತಮಿಳುನಾಡಿನಲ್ಲಿ ಒಂಬತ್ತು ಮತ್ತು ಪುದುಚೇರಿಯಲ್ಲಿ ಒಂದು ಸ್ಥಾನವನ್ನ ಕಾಂಗ್ರೆಸ್ಗೆ ಹಂಚಿಕೆ ಮಾಡಿದೆ – ಇದು 2019ರ ಸೂತ್ರದ ಪುನರಾವರ್ತನೆಯಾಗಿದೆ. 2019 ರಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ ಹತ್ತು ಸ್ಥಾನಗಳಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿತ್ತು. ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳಿವೆ.
ಇದಕ್ಕೂ ಮುನ್ನ ನಟ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮಯ್ಯಂ (MNM) ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರಿಕೊಂಡು ಮುಂಬರುವ ಲೋಕಸಭಾ ಚುನಾವಣೆಗೆ ತನ್ನ ಬೆಂಬಲವನ್ನ ನೀಡಿತು. 2025ರ ರಾಜ್ಯಸಭಾ ಚುನಾವಣೆಗೆ ಅವರ ಪಕ್ಷಕ್ಕೆ ಒಂದು ಸೀರ್ ನೀಡಲಾಗಿದೆ. ಕಮಲ್ ಹಾಸನ್ ಮತ್ತು ಸ್ಟಾಲಿನ್ ನಡುವಿನ ಸಭೆಯಲ್ಲಿ ಇದನ್ನ ಅಂತಿಮಗೊಳಿಸಲಾಗಿದೆ. ಇಬ್ಬರೂ ನಾಯಕರು ಮಾಡಿಕೊಂಡ ಒಪ್ಪಂದದ ಪ್ರಕಾರ, ತಮಿಳುನಾಡಿನ 39 ಲೋಕಸಭಾ ಸ್ಥಾನಗಳು ಮತ್ತು ಪುದುಚೇರಿಯ ಏಕೈಕ ವಿಭಾಗದಲ್ಲಿ ಎಂಎನ್ಎಂ ಪ್ರಚಾರ ಸಂಬಂಧಿತ ಕೆಲಸಗಳನ್ನ ಮಾಡಲಿದೆ.
#WATCH | Tamil Nadu | Congress will contest elections on 9 seats in Tamil Nadu and one seat in Puducherry. On the remaining seats, we will support the candidates of DMK and alliance parties. We will win all 40 seats of Tamil Nadu, says Congress MP KC Venugopal pic.twitter.com/fcksz92VVK
— ANI (@ANI) March 9, 2024
ಮನೆಯಲ್ಲಿ ‘ಬಿರಿಯಾನಿ ಎಲೆ’ಯನ್ನ ಸುಟ್ಟು ನೋಡಿ, ಮುಂದಾಗುವ ‘ಮ್ಯಾಜಿಕ್’ ನೀವೇ ನೋಡಿ
BREAKING: ಬೆಂಗಳೂರಲ್ಲಿ ‘ಗ್ಯಾರೇಜ್’ನಲ್ಲಿ ‘ಗ್ಯಾಸ್ ಸಿಲಿಂಡರ್’ ಸ್ಪೋಟ: ನಾಲ್ವರಿಗೆ ಗಾಯ, ಬೆಚ್ಚಿಬಿದ್ದ ಜನರು
ಬೆಂಗಳೂರು ಜನತೆಗೆ ಬಿಗ್ ರಿಲೀಫ್: ಮಾ.15ರ ನಂತ್ರ ಅನ್ಯ ಉದ್ದೇಶಕ್ಕೆ ನೀರು ಬಳಸಿದ್ರೆ 5,000 ದಂಡ