ಬೆಂಗಳೂರು : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಮತಬೇಟೆ ಆರಂಭವಾಗಿದೆ.
ಬಿಜೆಪಿಯ ಮುನಿರತ್ನರನ್ನು ಸೋಲಿಸಲು ಪಣತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಕ್ಷೇತ್ರವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪರನ್ನು ಮಹಿಳಾ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ, ಈ ಮೂಲಕ ಕ್ಷೇತ್ರದಲ್ಲಿ ಮಹಿಳಾ ಸಂಕಲ್ಪ ಸಮಾವೇಶದಲ್ಲಿ ಮಹಿಳಾ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ.
ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್ ರಾಜಕಾರಣದಲ್ಲಿ ಸಾಧ್ಯತೆ ಬಿಟ್ಟರೆ ಬೇರೇನೂ ಇಲ್ಲ, ಹೆಣ್ಣು ಮಕ್ಲಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು, ನಾನು 2004 ರಲ್ಲಿ ತೇಜಸ್ವಿನಿ ರಮೇಶ್ ಅವರನ್ನು ದೇವೇಗೌಡರ ವಿರುದ್ಧ ನಿಲ್ಲಿಸಿದ್ದೆ, ತೇಜಸ್ವಿನಿ 1 ಲಕ್ಷದ 30 ಸಾವಿರ ಮತಗಳಿಂದ ಜಯ ಗಳಿಸಿದರು , ಹೆಣ್ಣು ಮಕ್ಲಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂದರು.
ಹೆಣ್ಣು ಸಂಸಾರದ ಕಣ್ಣು
ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಆರ್ಆರ್ ನಗರದಲ್ಲಿ ಶ್ರೀಮತಿ ಕುಸುಮಾ ಹನುಮಂತರಾಯಪ್ಪ ಅವರು ಆಯೋಜಿಸಿದ್ದ ಮಹಿಳಾ ಸಂಕಲ್ಪ ಸಮಾವೇಶ, ಇಂದಿರಾ ನಮನ ಕಾರ್ಯಕ್ರಮದಲ್ಲಿ ಮಾತನಾಡಿದೆ. ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಮತ್ತು ಯುವಸಮೂಹ ಇವರಿಬ್ಬರು ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದಿದ್ದಾರೆ.
ಹೆಣ್ಣಿನ ಸಬಲೀಕರಣದ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶ್ರೀಮತಿ ಇಂದಿರಾ ಗಾಂಧಿಯವರು ಹೆಣ್ಣುಮಕ್ಕಳಿಗೆ ಮಾದರಿ. ಕಾಂಗ್ರೆಸ್ ಹಸ್ತ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಹಸ್ತ, ಸಂವಿಧಾನ ನೀಡಿದ ಹಸ್ತ, ತ್ರಿವರ್ಣ ಧ್ವಜವನ್ನು ನೀಡಿದ ಹಸ್ತ, ಭೂಮಿಯಿಲ್ಲದವರಿಗೆ ಭೂಮಿ ನೀಡಿ ಆರ್ಥಿಕ ಸಬಲತೆ ತಂದ ಹಸ್ತ ಎಂದು ಡಿಕೆಶಿ ಹೇಳಿದ್ದಾರೆ.
BIG NEWS: ಇನ್ಸ್ ಪೆಕ್ಟರ್ ನಂದೀಶ್ ಪ್ರಕರಣ: ತನಿಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
BREAKING NEWS : ‘ಬಸವಲಿಂಗ ಶ್ರೀ’ ಆತ್ಮಹತ್ಯೆ ಪ್ರಕರಣ : ಆರೋಪಿ ನೀಲಾಂಬಿಕೆ, ಮಹದೇವಯ್ಯಗೆ 14 ದಿನ ನ್ಯಾಯಾಂಗ ಬಂಧನ