ಬೆಂಗಳೂರು: ವರಾಹಿ ಜ್ಯುವೆಲ್ಲರಿ ಮಾಲಕಿಗೆ ವಂಚನೆ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ, ತಪ್ಪಿ ತಸ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಗೆ ಮಾಜಿ ಸಂಸದ ಡಿ.ಕೆ ಸುರೇಶ್ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರ ಬರೆದಿರುವಂತ ಅವರು, ಐಶ್ವರ್ಯಗೌಡ ಉರುಫ್ ನವ್ಯಶ್ರೀ ಎಂಬುವವರು ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡು ಹಲವಾರು ಜನರಿಗೆ ಚಿನ್ನದ ಆಭರಣ ಹಾಗೂ ಹಣವನ್ನು ವಂಚಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ವಂಚನೆಯನ್ನು ಮಾಡಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವುದು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇಂತಹ ಅನ್ಯಾಯಗಳು ಆಗದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ.
ಅಂದಹಾಗೆ ಆರೋಪಿ ಐಶ್ವರ್ಯಾಗೌಡ ಎಂಬುವರು ವರಾಹಿ ಜ್ಯುವೆಲ್ಲರ್ ಮಾಲಕಿಗೆ ಚಿನ್ನ ಪಡೆದು ಕೋಟಿ ಕೋಟಿ ವಂಚನೆ ಮಾಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ದೂರಿನ ವೇಳೆ ಮಾಜಿ ಸಂಸದ ಡಿ.ಕೆ ಸುರೇಶ್ ಅವರ ಹೆಸರು ಕೂಡ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಪ್ರಕರಣ ಸಂಬಂಧ ಸೂಕ್ತ ರೀತಿಯಲ್ಲಿ ತನಿಖಎ ನಡೆಸಿ, ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
SHOCKING : ಚಳಿಗೆ ಹೊಗೆ ಹಾಕಿ ಮಲಗಿದಾಗಲೇ ದುರಂತ : ಉಸಿರುಗಟ್ಟಿ ದಂಪತಿ ಸಾವು.!
ICC ವರ್ಷದ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿಗೆ ಜಸ್ಪ್ರೀತ್ ಬುಮ್ರಾ, ಜೋ ರೂಟ್ ನಾಮನಿರ್ದೇಶನ
BIGG NEWS : 2025 ನೇ ಸಾಲಿನ ರಾಜ್ಯ `ಸಾರ್ವತ್ರಿಕ ರಜೆ’ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ | Holiday List 2025