ರಾಮನಗರ: ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ತಾಯಿ ಗೌರಮ್ಮ ಅವರು ಗೇಟ್ಗೆ ಬೀಗ ಹಾಕಿ ಮನೆಯಲ್ಲಿ ಕುಳಿತಿದ್ದಾರೆ.
BIGG NEWS: RSS ಬ್ಯಾನ್ ವಿಚಾರ;ಯಾವ ಕಾಂಗ್ರೆಸ್ ನಾಯಕನಿಂದಲೂ ನಿಷೇಧ ಮಾಡಲು ಆಗಲ್ಲ; ಕೆ. ಎಸ್ ಈಶ್ವರಪ್ಪ
ಬುಧವಾರ ರಾತ್ರಿ ಡಿಕೆಶಿ ಕನಕಪುರ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಡಿಕೆಶಿಯ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿರುವ ಮನೆಯ ಗೇಟ್ಗೆ ಬೀಗ ಹಾಕಿದ್ದಾರೆ. ಗೇಟ್ ಗೆ ಬೀಗ ಹಾಕಿ ಮನೆಯ ಹೊರಾಂಗಣದಲ್ಲಿ ಪತ್ರಿಕೆ ಓದುತ್ತಾ ಡಿಕೆಶಿ ತಾಯಿ ಗೌರಮ್ಮ ಕುಳಿತಿದ್ದಾರೆ.
ಇತ್ತ ಡಿಕೆಶಿಯವರು, ನನಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸಿಬಿಐ ದಾಳಿ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಏನ್ಮಾಡ್ತಿರಾ ಯಾರ ಮೇಲೆ ಪ್ರೀತಿ ಇರುತ್ತಾ ಅವರ ಮನೆ ದಾಳಿ ಮಾಡುತ್ತಾರೆ. ನಾನು ಈ ಕೆಲಸದಲ್ಲಿದ್ದಿನಿ. ಅವರು ಅಲ್ಲಿ ದಾಳಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಜಮೀನು ನೋಡಿದರೆ, ಮನೆ ನೋಡಿದ್ದಾರೆ. ಅಧಿಕಾರಿಗಳು ಏನೇನೂ ಮಾಡಿದ್ದಾರೋ ಗೊತ್ತಿಲ್ಲ. ನನ್ನ ತಾಯಿಗೆ ವಯಸ್ಸಾಗಿದೆ. ಮರೆವು ಜಾಸ್ತಿ ಆಗಿದೆ. ಸಿಬಿಐ ಅಂದಕೂಡಲೇ ನಮ್ಮ ಜನ ಗಡಗಡ ಅಂತಾರೆ ಎಂದರು.