ಮೈಸೂರು : ಹಾಸನ ಸಂಸದ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮೈಸೂರಿನಲ್ಲಿ HD ಕುಮಾರಸ್ವಾಮಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು, ಕಾರು ಚಾಲಕ ಕಾರ್ತಿಕ್ ಹತ್ತಿರ ಪೆನ್ ಡ್ರೈವ್ ಪಡೆದುಕೊಂಡು ವಿಡಿಯೋಗಳನ್ನ ಡಿಕೆ ಶಿವಕುಮಾರ್ ಟ್ರಾನ್ಸ್ಫರ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣದಲ್ಲಿ ಅರ್ಧ ನಿಮಿಷದಲ್ಲಿ ಎಲ್ಲವೂ ತೀರ್ಮಾನ ಆಗಿದೆ. ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರವಾದ ಆರೋಪ ಮಾಡಿದ್ದಾರೆ. ನಾನು ಪ್ರಜ್ವಲ್ ಪರ ಇಲ್ಲ ಆರೋಪ ಸಾಬೀದಾದರೆ ಶಿಕ್ಷೆ ಕೊಡಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಧಿಕಾರ ಶಾಶ್ವತ ಅಲ್ಲ ಅಧಿಕಾರ ದುರುಪಯೋಗ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪೆನ್ ಡ್ರೈವ್ ಹರಿಬಿಟ್ಟ ಕಾರಣಿಕರ್ತರು ಯಾರಿದ್ದಾರೆ? ರೇವಣ ಮನೆಯಲ್ಲಿ ಕೆಲಸಕ್ಕೆ ಇದ್ದ ಕಾರ್ತಿಕ್ ಅವನು ಪೆನ್ ಡ್ರೈವ್ ಮೂಲ. ಅವನು ಎಲ್ಲಿಗೆ ಹೋದ? ಹಾಸನ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಹಿಡಿದುಕೊಂಡು ಹಳೇ ನರಸೀಪುರದಲ್ಲಿ ವ್ಯಕ್ತಿ ಇಟ್ಟುಕೊಂಡು ಡಿಕೆ ಸುರೇಶ್ ಮನೆಗೆ ಮೊದಲು ಭೇಟಿ ನೀಡಿ ಅಲ್ಲಿ ಚರ್ಚೆ ಮಾಡಿ ನಂತರ ಡಿಕೆ ಶಿವಕುಮಾರ್ ಬಳಿಗೆ ಬಂದಿದ್ದಾನೆ.
ಸಿಡಿ ಶಿವು ಅವರು ಆ ಪೆನ್ ಡ್ರೈವ್ ನನ್ನು ಟ್ರಾನ್ಸ್ಫರ್ ಮಾಡ್ಕೊಂಡು ವಾಪಸ್ ತಂದು ಕಾರ್ತಿಕ್ ಕೊಟ್ಟಿದ್ದಾರೆ.ಸಮಯ ಬಂದಾಗ ಉಪಯೋಗಿಸೋಣ ಅಂತ ಹೇಳಿ ಕಳುಹಿಸಿದ್ದಾರೆ. ಇದೀಗ ಕಾರ್ತಿಕ್ 8 ಜನ ಪೊಲೀಸ್ ಸಿಬ್ಬಂದಿಗಳ ರಕ್ಷಣೆಯಲ್ಲಿದ್ದಾನೆ.ಇವರೆಲ್ಲ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ಮಾಡಿದ್ದಾರೆ. ಉಪಮುಖ್ಯಮಂತ್ರಿಗಳು ಇಂಥವರಿಗೆ ಆಶ್ರಯ ಕೊಟ್ಟಿದ್ದಾರೆ ಎಂದು ಆರೋಪಿಸಿದರು.