ಮೈಸೂರು : ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿ ಕೊಟ್ಟರೆ ಮುಂದಿನ ಪೂರ್ಣಾ ಅವಧಿಯಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂಬ ಯತೀಂದ್ರ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಐದು ವರ್ಷ ಸಿಎಂ ಆಗುವ ಆಸೆ ಇರುವ ಸಿದ್ದರಾಮಯ್ಯನವರು ಮಗನ ಮೂಲಕ ಹೇಳಿಸಿದ್ದು ಡಿಕೆ ಶಿವಕುಮಾರ್ ಅವರೇ ಸಿದ್ದರಾಮಯ್ಯನವರೇ ನಿಮಗೆ ವಿರೋಧಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಈ ಕುರಿತಂತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಬಗ್ಗೆ ನನಗೆ ಪಾಪ ಅನ್ನಿಸುತ್ತದೆ. ಎಸ್ಎಂ ಕೃಷ್ಣ ಬಳಿಕ ಮತ್ತೊಮ್ಮೆ ಅವಕಾಶ ಬಂದಿದೆ ಎಂದು ಹೇಳಿದ್ದರು.ಚುನಾವಣೆಗೆ ಮುನ್ನ ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ತಿಳಿಸಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಪಕ್ಷ ಕಟ್ಟಿ ಬಂಡವಾಳವನ್ನು ಹಾಕಿದ್ರು ಅಧಿಕಾರ ಬಂದ ಮೇಲೆ ಹಠ ಹಿಡಿದು ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು ಎಂದು ಹೇಳಿದರು.
ಕುರ್ಚಿಯಲ್ಲಿ ಕೂತ ಕೂಡಲೇ ಪೂರ್ಣಾವಧಿ ಮುಖ್ಯಮಂತ್ರಿಯಾಗುವ ಪ್ಲಾನ್ ಆಗಿತ್ತು. ಎಂಬಿ ಪಾಟೀಲ್, ಸತೀಶ್, ರಾಜಣ್ಣ ಮೂಲಕ ಮೊದಲು ಹೇಳಿಸಿದ್ದರು. ಈಗ ಮಗನಿಂದ ಪೂರ್ಣಾವಧಿ ಸಿಎಂ ಅಂತ ಹೇಳಿಕೆ ಕೊಡಿಸಿದ್ದಾರೆ. ಮಗನ ಮೂಲಕ ಡಿ ಕೆ ಶಿವಕುಮಾರ್ ಗೆ ಸಂದೇಶ ರವಾನಿಸಿದ್ದಾರೆ. ಸ್ವಜಾತಿಯವರು ಮುಸ್ಲಿಮರು ಕೈ ಹಿಡಿದರೆಂದು ಯತೀಂದ್ರ ಹೇಳಿದ್ದಾರೆ. ಚಾಮುಂಡೇಶ್ವರಿಯಲಿ ಸಿದ್ದರಾಮಯ್ಯಗೆ ಮತ ಹಾಕಿದ್ದು ಒಕ್ಕಲಿಗರ ಅಲ್ಲವಾ?ಎಂದು ಪ್ರಶ್ನಿಸಿದ್ದಾರೆ.
ವರುಣ ಕ್ಷೇತ್ರದಲ್ಲಿ ಲಿಂಗಾಯತರು ತಾನೇ ನಿಮಗೆ ಮತ ಹಾಕಿದ್ದು, ಡಿಕೆ ಶಿವಕುಮಾರ್ ಅವರೇ ನಿಮ್ಮ ವಿರೋಧಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದು ಒಕ್ಕಲಿಗರು ಮತ ಹಾಕಿದ್ದರು.ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯುವ ಪ್ರಯತ್ನ ಮಾಡುತ್ತಾರೆ.ಸ್ವಜಾತಿ ಮುಸ್ಲಿಮರ ಮೇಲೆ ಮಾತ್ರ ಸಿಎಂ ಸಿದ್ದರಾಮಯ್ಯಗೆ ಪ್ರೀತಿ ಇದೆ. ಮೈಸೂರಿನಲ್ಲಿ ಸಿಎಂ ವಿರುದ್ಧ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.