ಬೆಂಗಳೂರು : ಚನ್ನಪಟ್ಟಣದ ಉಪಚುನಾವಣೆಯಲ್ಲಿ ಈ ಬಾರಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪರ್ಧಿಸಲಿದ್ದಾರೆ ಎಂಬ ಕೂಗು ಕೇಳಿ ಬಂದಿದೆ ಈ ಒಂದು ವಿಚಾರಕ್ಕೆ ಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು ಈ ಬಾರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆ ಸಹೋದರರಲ್ಲಿ ಆರ್ ಎಸ್ ಸ್ಪರ್ಧಿಸಿದರು ಅವರನ್ನು ಸೋಲಿಸುತ್ತೇವೆ ಎಂದು ತಿಳಿಸಿದರು.
ಈ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಭ್ರಷ್ಟ ಸರ್ಕಾರ ಹಣದ ಹೊಳೆ ಹರಿಸುತ್ತೆ. ಯಾರೇ ಅಭ್ಯರ್ಥಿಯಾದರು ಗೆಲ್ಲೋಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ.ನಾವು ಕುಮಾರಸ್ವಾಮಿ ಈ ವಿಚಾರದಲ್ಲಿ ಮುಕ್ತರಾಗಿದ್ದೇವ ಇಪ್ಪತ್ತು ವರ್ಷಗಳಿಂದ ಡಿಕೆ ಚನ್ನಪಟ್ಟಣಕ್ಕೆ ಹೋಗಿಯೇ ಇಲ್ಲ. ಈಗ ನಾಟಕ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
20,000 ಮತ ಬಂದಿದ್ದಕ್ಕೆ ಅಲ್ಲಿ ಹೋಗುತ್ತೇವೆ ಅಂದಿದ್ದಾರೆ.ಮತ ಹಾಕಿದವರಿಗೆ ನಮಸ್ಕಾರ ಹಾಕಲು ಹೋಗುತ್ತಾರಂತೆ.ಎಷ್ಟು ನಮಸ್ಕಾರ ಹಾಕುತ್ತಾರೆ ಅಂತ ನೋಡೋಣ. ಡಿಕೆ ಸಹೋದರರಲ್ಲಿ ಯಾರೆ ನಿಂತರು ಸೋಲಿಸುತ್ತೇವೆ. ಚನ್ನಪಟ್ಟಣದಲ್ಲಿ ಯಾರೇ ಸ್ಪರ್ಧಿಸಿದರು ಸೋಲಿಸುತ್ತೇವೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಹೇಳಿಕೆ ನೀಡಿದರು.
ಸಿಎಂ ಕಾಟಾಚಾರಕ್ಕಾಗಿ ಸಂಸದರ ಬೇಟೆಗೆ ದೆಹಲಿಗೆ ಹೋಗುತ್ತಿದ್ದಾರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿನಿತ್ಯ ಬೈಯುತ್ತಾರೆ. ದೆಹಲಿಗೆ ತೆರಳುತ್ತಿರುವುದು ಇದೇನು ಪಿನ್ಯಾಪಾಕಿಸ್ತಾನ ಭೇಟಿ ಮಾಡಕ್ಕೆ ಎಂದು ತಕ್ಷಣ ಕುರಿತು ವ್ಯಂಗ್ಯವಾಡಿದ್ದಾರೆ.