ಕೋಲಾರ : ಕರ್ನಾಟಕದೆಲ್ಲೆಡೆ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅನೇಕ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ಗಮನ ಸೆಳೆಯುತ್ತಿವೆ. ಆದರೆ ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲಾಡಳಿತ ಹೊರಡಿಸಿರುವ ಹೊಸ ಆದೇಶವೊಂದು ಗಣೇಶೋತ್ಸವ ಆಯೋಜಕರನ್ನು ಸಂಕಷ್ಟಕ್ಕೆ ದೂಡಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಆದೇಶಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಹೌದು ಕೋಲಾರ ಜಿಲ್ಲೆಯಾದ್ಯಂತ ಸಂಭ್ರಮದಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಡಿಜೆ ಸೌಂಡ್ಸ್ ನಿಷೇಧಿಸಿ ಆದೇಶ ಹೊರಡಿಸಿದೆ. ಇದು ಸಾರ್ವಜನಿಕರ ಆಕ್ಷೇಪಕ್ಕೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಏಕಾಏಕಿ ಡಿಜೆ ಸೌಂಡ್ಸ್ ನಿಷೇಧಿಸಿರುವುದರಿಂದ ಅಪಾರ ನಷ್ಟವಾಗುತ್ತಿದೆ ಎಂದು ಡಿಜೆ ಮಾಲೀಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ.
ಅಲ್ಲದೆ ಇದೆ ವೇಳೆ ಡಿಜೆ ಮಾಲೀಕರು ಅಸಮಾಧಾನ ಹೊರ ಹಾಕಿದ್ದು, ಈಗಾಗಲೇ ಅಡ್ವಾನ್ಸ್ ತೆಗೆದುಕೊಂಡಿದ್ದೇವೆ. ಈಗ ಬ್ಯಾನ್ ಮಾಡಿದ್ದಾರೆ. ಜಿಲ್ಲಾಡಳಿತದ ನಿರ್ಧಾರದಿಂದ ನಾವು ನಷ್ಟ ಅನುಭವಿಸುವಂತಾಗಿದೆ. ನಿಭಂದನೆಗಳನ್ನು ಹಾಕಿ ಅನುಮತಿ ಕೊಡಿ. ಅದರ ಬದಲು ನಿಷೇಧ ಹೇರಬೇಡಿ ಎಂದು ಡಿಜೆ ಮಾಲೀಕರು ಮನವಿ ಮಾಡಿದ್ದಾರೆ.
ವರ್ಷಕ್ಕೊಮ್ಮೆ ಬರುವ ಹಬ್ಬದಲ್ಲಿ ನಮ್ಮ ಹೊಟ್ಟೆ ಮೇಲೆ ಹೊಡೆಯುವ ನಿರ್ಧಾರ ತೆಗೆದಕೊಂಡಿದ್ದಾರೆ. ಸಾಲ ಸೋಲ ಮಾಡಿ ಡಿಜೆ ಸಿಸ್ಟಮ್ಗಳನ್ನು ತಂದಿದ್ದೇವೆ. ಈಗ ಸಡನ್ ಆಗಿ ಬ್ಯಾನ್ ಮಾಡಿದ್ರೆ ಅಡ್ವಾನ್ಸ್ ಕೊಟ್ಟಿರೋರಿಗೆ ಎನ್ ಉತ್ತರ ಹೇಳೋಣ ನಾವು. ಎಂದು ಅಳಲು ತೋಡಿಕೊಂಡಿದ್ದಾರೆ.







