ಬೆಂಗಳೂರು: ಇಂದು ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ರಾಜ್ಯ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲೂ ಹಬ್ಬದ ಸಂಭ್ರಮ ಸಡಗರದಿಂದ ಕೂಡಿದೆ.
BREAKING NEWS : `ಇಂಗ್ಲಿಷ್ ಮಾಸ್ಟರ್’ ಖ್ಯಾತಿಯ `ಗುಡಿಬಂಡೆ ಜಗನ್ನಾಥ್’ ಇನ್ನಿಲ್ಲ| Gudibande Jagannath no more
ಇಳಿ ವಯಸ್ಸಿನಲ್ಲೂ ಅತ್ಯಂತ ಉತ್ಸಾಹದಿಂದ ಬಿಎಸ್ವೈ ಗೋ ಪೂಜೆ ನೆರವೇರಿಸಿ ಬೆಳಕಿನ ಹಬ್ಬವನ್ನು ಸಂಭ್ರಮಿಸಿದರು.ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮುಂಜಾನೆಯಿಂದಲೇ ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
BREAKING NEWS : `ಇಂಗ್ಲಿಷ್ ಮಾಸ್ಟರ್’ ಖ್ಯಾತಿಯ `ಗುಡಿಬಂಡೆ ಜಗನ್ನಾಥ್’ ಇನ್ನಿಲ್ಲ| Gudibande Jagannath no more
ಸ್ವತಃ ಯಡಿಯೂರಪ್ಪ ಅವರೇ ಗೋಪೂಜೆ ಮಾಡಿದರು.ಮುಖ್ಯಮಂತ್ರಿ ಆಗಿದ್ದಾಗ ಉಡುಗೊರೆಯಾಗಿ ಪಡೆದಿದ್ದ ಗಿರ್ ತಳಿಯ ಹಸುಗಳನ್ನು ಸಾಕುತ್ತಿರುವ ಯಡಿಯೂರಪ್ಪ ಹಸು, ಕರು ಜೊತೆ ಕಾಲ ಕಳೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅಂತೆಯೇ ನೆಚ್ಚಿನ ಹಸು ಕರುಗಳಿಗೆ ಗೋಪೂಜೆ ಸಲ್ಲಿಸಿ ಧಾನ್ಯಗಳನ್ನು ತಿನ್ನಿಸಿ ಭಕ್ತಿ ಸಮರ್ಪಿಸಿದರು.