ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಕಿರುತೆರೆ ಪ್ರೇಕ್ಷಕರ ಮೋಡಿ ಮಾಡಿದ್ದ ಸ್ಪರ್ಧಿ ದಿವ್ಯಾ ಉರುಡುಗ ಇದೀಗ ಎಲಿಮಿನೇಟ್ ಆಗಿದ್ದಾರೆ.
ಕಳೆದ ಬಿಗ್ ಬಾಸ್-8 ಗೂ ಕಾಲಿಟ್ಟಿದ್ದ ದಿವ್ಯಾ ಫೈನಲಿಸ್ಟ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ನಂತರ ಸೀಸನ್-9 ಕ್ಕೂ ಪ್ರವೇಶ ಮಾಡಿದ್ದರು. ಆದರೆ ಈ ಸಲ ಕೂಡ ಅದೃಷ್ಟ ಕೈ ಕೊಟ್ಟಿದ್ದು, ದಿವ್ಯಾ ಉರುಡುಗ ಇದೀಗ ಎಲಿಮಿನೇಟ್ ಆಗಿದ್ದಾರೆ.
ಕಳೆದ ಸೀಸನ್ನಲ್ಲಿ ಅರವಿಂದ್ ಕೆ.ಪಿ -ದಿವ್ಯಾ ಉರುಡುಗ ಜೋಡಿ ಸಖತ್ ಗಮನ ಸೆಳೆದಿದ್ದರು. ಇವರಿಬ್ಬರ ನಡುವೆ ಪ್ರೀತಿ-ಪ್ರೇಮವಿದೆ ಎಂಬ ಗುಸುಗುಸು ಕೇಳಿಬಂದಿತ್ತು. ಅಲ್ಲದೇ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಒಟ್ಟಗೆ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.
ಡಿಸೆಂಬರ್ 30 ಮತ್ತು 31ರಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು,ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಮತ್ತು ರಾಕೇಶ್ ಅಡಿಗ ನಡುವೆ ಭಾರೀ ಕಾಂಪಿಟೀಶನ್ ನಡೆಯುತ್ತಿದೆ. ಯಾರಿಗೆ ಸಿಗಲಿದೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಮದುವೆಯಾದ ಮೊದಲ ರಾತ್ರಿ ಹೆಂಡತಿ ರಹಸ್ಯ ಬಯಲು : ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿರಾಯ!
BREAKING NEWS : ಮೈಸೂರಿನಲ್ಲಿ 4 ವರ್ಷದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನಿಸಿದ್ದ ‘ಪುಂಡಾನೆ’ ಸೆರೆ