ಲಖನೌ: ವಿಚ್ಛೇದಿತ ಪತಿಯು ಯಾವುದೇ ನೆಪವೊಡ್ಡದೇ ತನ್ನ ಪತ್ನಿಗೆ ಕೂಲಿ ಮಾಡಿಯಾದರೂ ಜೀವನಾಂಶ ನೀಡಬೇಕು ಎಂಬುದಾಗಿ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.
ವಿಚ್ಚೇದಿತೆಗೆ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಪತಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವಂತ ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ರೇಣು ಅಗರ್ವಾಲ್ ಅವರಿದ್ದ ನ್ಯಾಯಪೀಠವು, ಪತಿಗೆ ಯಾವುದೇ ಕೆಲಸ ಇಲ್ಲದಿದ್ದರೂ, ಆತ ಆರೋಗ್ಯವಂತ ವ್ಯಕ್ತಿಯಾಗಿದ್ದರೇ, ಕೌಶಲ್ಯ ರಹಿತ ಕಾರ್ಮಿಕನಾಗಿ ದಿನಕ್ಕೆ 300 ರಿಂದ 400 ರೂಗಳನ್ನು ದುಡಿಯುವ ಸಾಮರ್ಥ್ಯ ಹೊಂದಿರುತ್ತಾನೆ ಎಂದಿದೆ.
ಈ ಹಿನ್ನಲೆಯಲ್ಲಿ ವಿಚ್ಛೇದಿತ ಪತ್ನಿಗೆ ಯಾವುದೇ ನೆಪ ಹೇಳದೇ, ಕೂಲಿ ಮಾಡಿಯಾದ್ರೂ ಪತ್ನಿಗೆ ಜೀವನಾಂಶ ನೀಡಬೇಕು ಎಂಬುದಾಗಿ ಸೂಚಿಸಿದೆ.
ಏನಿದು ಪ್ರಕರಣ.?
2015ರಲ್ಲಿ ವಿವಾಹವಾಗಿದ್ದಂತ ದಂಪತಿಗಳು 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಈ ವೇಳೆ ಪತ್ನಿ ವರದಕ್ಷಿಣೆ ಪ್ರಕರಣ ದಾಖಲಿಸಿದ್ದರು. ಈ ದೂರಿಗೆ ಪತಿ ನಾನು ಬಡವ, ಕೆಲಸ ಇಲ್ಲ, ಕೃಷಿಯಲ್ಲಿ ಕೆಲ ಸಂಪಾದನೆ ಮಾಡುತ್ತಿದ್ದೇನೆ. ನನ್ನ ಪೋಷಕರು ಹಾಗೂ ಸಹೋದರಿಯನ್ನು ನೋಡಿಕೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಹೇಳಿದ್ದರು.
ಈ ಮನವಿಯನ್ನು ಪುರಸ್ಕರಿಸಿದಂತ ನ್ಯಾಯಾಲಯವು, ವಿಚ್ಛೇದಿತ ಪತಿಯು ಯಾವುದೇ ನೆಪವೊಡ್ಡದೇ ತನ್ನ ಪತ್ನಿಗೆ ಕೂಲಿ ಮಾಡಿಯಾದರೂ ಜೀವನಾಂಶ ನೀಡಬೇಕು ಎಂಬುದಾಗಿ ಆದೇಶಿಸಿದೆ.
BREAKING: ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣ: ವಿಚಾರಣೆಗೆ ಪಾಟ್ನಾದ ED ಕಚೇರಿಗೆ ಹಾಜರಾದ ಲಾಲು ಯಾದವ್
BREAKING: 7 ದಿನಗಳಲ್ಲಿ ‘ದೇಶಾದ್ಯಂತ’ CAA ಜಾರಿ: ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ