ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ 2021 ರ ವಿಶ್ವ ಸುಂದರಿ ಹರ್ನಾಜ್ ಸಂಧು ಅವರು ಲಿವಾ ಮಿಸ್ ದಿವಾ 2022 ಪ್ರಶಸ್ತಿ ಕಿರೀಟನ್ನು ದಿವಿತಾ ಅವರಿಗೆ ತೊಡಿಸಿದ್ದಾರೆ. ತೆಲಂಗಾಣದ ಪ್ರಗ್ಯಾ ಅಯ್ಯಗರಿ ಲಿವಾಮಿಸ್ ದಿವಾ ಸೂಪರ್ ನ್ಯಾಷನಲ್ ವಿಚೇತರಾಗಿ ಹೊರಹೊಮಿದ್ದಾರೆ. ದಿವಿತಾ ರೈಗೆ ಕಿರೀಟ ತೊಡಿಸಿದವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೊವನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
View this post on Instagram
ಈ ವಿಡಿಯೋದಲ್ಲಿ ಇಬ್ಬರು ಸುಂದರಿಯರು ವೇದಿಕೆಯಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ.. ದಿವಿತಾ ಗುಲಾಬಿ ಬಣ್ಣದ ಹಾಲ್ಟರ್-ನೆಕ್ ಗೌನ್ ಧರಿಸಿದ್ದರೆ, ಹರ್ನಾಜ್ ಬರ್ಗಂಡಿ ಶಿಮ್ಮರ್ ಗೌನ್ ಧರಿಸಿದ್ದರು.
View this post on Instagram
ಮಿಸ್ ದಿವಾ ಯೂನಿವರ್ಸ್2022 ಕಿರೀಟ ಗೆದ್ದ ಬಳಿಕ ತಮ್ಮ ಉತ್ಸಾಹವನ್ನು ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ. ” ಈ ಕಿರೀಟ ನನಗೆ ಸಿಕ್ಕಿದೆ ಅನ್ನೋದಕ್ಕೆ ಬಹಳ ಖುಷಿಯಾಗುತ್ತಿದೆ. ಈ ಕೀರಿಟ ನಾನು ಮುಡಿಗೇರಿಸಿಕೊಂಡಿದ್ದೇನೆ ಅನ್ನೋದಕ್ಕೆ ನನಗೆ ನಂಬೋದಕ್ಕೆ ಸಾಧ್ಯವಾಗುತ್ತಿಲ್ಲ. ಈ ಖುಷಿಯಾಗಿದೆ ಹೇಳೋದಕ್ಕೆ ಪದಗಳೇ ಸಾಲುತ್ತಿಲ್ಲ ಎಂದು ನಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ದಿವಿತಾ ರೈ ಅವರು ದಿಲೀಫ್ ರೈ ಹಾಗೂ ತಾಯಿ ಪವಿತ್ರಾ ರೈ ಪುತ್ರಿ ತಂದೆ ಉದ್ಯೋಗದ ಹಿನ್ನೆಯಲ್ಲಿ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ . ಜೆಜೆ. ಕಾಲೇಜ್ ಆಫ್ ಅರ್ಕಿಟೆಕ್ಟರ್ ಪದವಿ ಪಡದಿದ್ದಾರೆ. ಇವರ ಅಣ್ಣ ದೈವಿಕ್ ರೈ ಕ್ರಿಕೆಟಿ , ಭಾರತದ ಒಳಾಂಗಣ ಕ್ರಿಕೆಟ್ ತಂಡ ಸದಸ್ಯರಾಗಿದ್ದಾರೆ 2017ರ ಒಳಾಂಗಣ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿ ಇವರು ಇದ್ದರು.
ಮಿಸ್ ದಿವಾ ಯೂನಿವರ್ಸ್ 2022 ಸ್ಪರ್ಧೆಯಲ್ಲಿ, ಮಾಜಿ ಸೌಂದರ್ಯ ರಾಣಿಯರು ಮತ್ತು ಖ್ಯಾತನಾಮರಾದ ಲಾರಾ ದತ್ತಾ, ಮಿಸ್ ಯೂನಿವರ್ಸ್ 2000, ಮೆಹರ್ ಕ್ಯಾಸ್ಟೆಲಿನೊ, ಮಿಸ್ ಇಂಡಿಯಾ 1964, ಸಂಗೀತಾ ಬಿಲಾನಿ, ಮಿಸ್ ಇಂಡಿಯಾ 1980 ಮತ್ತು ತನುಶ್ರೀ ದತ್ತಾ, ಮಿಸ್ ಇಂಡಿಯಾ ಯೂನಿವರ್ಸ್ 2004 ರಂತಹ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.