ಕೆಎನ್ಎನ್ಡಿಜಿಟಲ್ ಡೆಸ್ಕ್ : ನಕಲಿ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಹೊರಿಸಲಾದ ವ್ಯಕ್ತಿಯ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ದೆಹಲಿ ಹೈಕೋರ್ಟ್ ವಿಚಿತ್ರವಾದ ಷರತ್ತನ್ನ ವಿಧಿಸಿದೆ. ಹೌದು, ಆರೋಪಿಯ ವಿರುದ್ಧದ ಎಫ್ಐಆರ್ ವಜಾಗೊಳಿಸುವುದಾಗಿ ಹೇಳಿದ ನ್ಯಾಯಾಲಯ, 100ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ಎರಡು ಅನಾಥಾಶ್ರಮಗಳಲ್ಲಿ ಉತ್ತಮ ಗುಣಮಟ್ಟದ 200 ಬರ್ಗರ್ ನೀಡಬೇಕು ಎಂದು ಷರತ್ತು ವಿಧಿಸಿದೆ.
ನ್ಯಾಯಾಲಯವು ತನ್ನ ತೀರ್ಪನ್ನ ನೀಡುವಾಗ, ಕೋವಿಡ್ ಪ್ರೋಟೋಕಾಲ್ ಗಮನದಲ್ಲಿಟ್ಟುಕೊಂಡು ಎಲ್ಲಾ ಬರ್ಗರ್ಗಳನ್ನು ಉತ್ತಮ ಮತ್ತು ಸುರಕ್ಷಿತ ವಾತಾವರಣದಲ್ಲಿ ತಯಾರಿಸಲಾಗಿದೆ ಅನ್ನೋದನ್ನ ಖಚಿತ ಪಡೆಸಿಕೊಳ್ಳುವಂತೆ ನಿರ್ದೇಶನ ನೀಡಿದೆ. ಇನ್ನು “ಸಂತ್ರಸ್ತೆ”ಗೆ ಒಂದು ದಿನದೊಳಗೆ 4.5 ಲಕ್ಷ ರೂ.ಗಳ ದಂಡವನ್ನು ಪಾವತಿಸುವಂತೆ ನ್ಯಾಯಾಲಯವು ಪತಿಗೆ ತಿಳಿಸಿದೆ.
ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ಏಕಸದಸ್ಯ ಪೀಠವು ಇದನ್ನ ವೈವಾಹಿಕ ವಿವಾದ ಎಂದು ಕರೆದಿದೆ. ಐಪಿಸಿಯ ಸೆಕ್ಷನ್ 376ರ ಅಡಿಯಲ್ಲಿ, ಅಪರಾಧವನ್ನ ಸುಲಭವಾಗಿ ವಿಲೇವಾರಿ ಮಾಡಲು ಅನುಮತಿಸಲಾಗುವುದಿಲ್ಲ. ಆದ್ರೆ, ಈ ಪ್ರಕರಣದಲ್ಲಿ ವಿಚಿತ್ರ ಸಂಗತಿಗಳು ಮತ್ತು ಸಂದರ್ಭಗಳಿವೆ ಎಂದು ನ್ಯಾಯಮೂರ್ತಿ ಸಿಂಗ್ ಹೇಳಿದರು. ಎರಡೂ ಪಕ್ಷಗಳು ಪರಸ್ಪರ ಮದುವೆಯಾಗಿದ್ದು, ಇಬ್ಬರ ನಡುವೆ ಬಿರುಕು ಉಂಟಾಗಿತ್ತು. ಈ ಕಾರಣದಿಂದಾಗಿ, ಅವರಿಬ್ಬರೂ ಬೇರ್ಪಡಲು ನಿರ್ಧರಿಸಿದರು. “ಇದು ವೈವಾಹಿಕ ವಿವಾದದ ಪ್ರಕರಣವಾಗಿದೆ ಎಂದರು.
ಸಂತ್ರಸ್ತೆಗೆ ನೀಡಿದ ತಪ್ಪು ಸಲಹೆ ಮತ್ತು ತಪ್ಪು ತಿಳುವಳಿಕೆಯಿಂದಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ನ್ಯಾಯಮೂರ್ತಿ ಸಿಂಗ್ ಹೇಳಿದರು. ಅಂದಿನಿಂದ, ಈ ಇಡೀ ಪ್ರಕರಣವು 2020ರಿಂದ ನಡೆಯುತ್ತಿದೆ. ಈಗ ವ್ಯರ್ಥವಾಗುತ್ತಿರುವ ಯಾವುದೇ ಪ್ರಮುಖ ಪ್ರಕರಣಕ್ಕೆ ಪೊಲೀಸರು ಮತ್ತು ನ್ಯಾಯಾಂಗವು ಹೆಚ್ಚಿನ ಸಮಯವನ್ನು ನೀಡಬಹುದಾಗಿತ್ತು.
ಅರ್ಜಿದಾರರು ಕೆಲವು ಸದ್ಗುಣದ ಕೆಲಸವನ್ನ ಮಾಡಬೇಕು ಎಂದು ನ್ಯಾಯಾಲಯ ಹೇಳಿದ್ದು, ಅರ್ಜಿದಾರರ ಪ್ರಕಾರ, ಅವರು ನೋಯ್ಡಾ ಮತ್ತು ಮಯೂರ್ ವಿಹಾರ್ನಲ್ಲಿ ರೆಸ್ಟೋರೆಂಟ್ಗಳನ್ನು ನಡೆಸುತ್ತಿದ್ದಾರೆ, ಬರ್ಗರ್ ಸಿಂಗ್ ಮತ್ತು ವಾಟ್-ಎ-ಬರ್ಗರ್ ಎಂದು ಹೆಸರಿಸಲಾಗಿದೆ. ಅವರು ಉತ್ತಮ ಗುಣಮಟ್ಟದ 200 ಬರ್ಗರ್’ಗಳನ್ನು ಸ್ವಚ್ಛವಾಗಿ ತಯಾರಿಸಬೇಕು ಮತ್ತು ಅವುಗಳನ್ನು ಕನಿಷ್ಠ 100 ಮಕ್ಕಳಿರುವ ಎರಡು ಅನಾಥಾಶ್ರಮಗಳಿಗೆ ನೀಡಬೇಕು.
ನ್ಯಾಯಾಲಯದ ಇಂತಹ ಆದೇಶದ ನಂತರ, ಸುಳ್ಳು ಪ್ರಕರಣ ದಾಖಲಿಸಿದ ಮಹಿಳೆಯ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಉದ್ಭವಿಸುತ್ತಿವೆ. ಇನ್ನು ಈ ಮಾಹಿತಿಯನ್ನ ಎನ್ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೇನ್ ಅಫೇರ್ಸ್ ಹಂಚಿಕೊಂಡಿದೆ.