ಬೆಂಗಳೂರು : ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೇರಿ ಆಸ್ತಿ ಗಳಿಸಿ ಕೆಸ್ ಗೆ ಸಂಬಂಧಿಸಿದಂತೆ ತನಿಕೆಗೆ ಸರ್ಕಾರದ ಸಮ್ಮತಿಯನ್ನು ಹಿಂಪಡೆದ ಕ್ರಮವನ್ನು ಪ್ರಶ್ನಿಸಿ ಸಿ.ಬಿ.ಐ ಅರ್ಜಿ ಸಲ್ಲಿಸಿತ್ತು. ಸಿಬಿಐ ಹಾಗೂ ಯತ್ನಾಳ್ ಸಲ್ಲಿಸುವ ಅರ್ಜಿಯನ್ನು ಇಂದು ಹೈಕೋರ್ಟ್ ವಿಚಾರ ನಡೆಸಿದ್ದು ನ್ಯಾ. ಕೆ ಸೋಮಶೇಖರ್, ನ್ಯಾ.ಉಮೇಶ್ ಹಾಗೂ ನ್ಯಾ.ಎಂ ಅಡಿಗರ ಪೀಠ ವಿಚಾರಣೆ ನಡೆಸಿತ್ತು.
ತನಿಖೆಯ ಹೊಣೆ ಲೋಕಾಯುಕ್ತ ಪೊಲೀಸ್ ರಿಗೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರನ್ನು ಪ್ರತಿ ವಾದಿಯಾಗಿಸಲು ಮನವಿ ಸಲ್ಲಿಸಲಾಗಿದೆ.ಅಲ್ಲದೆ ಯತ್ನಾಳ್ ರಿಟ್ ಅರ್ಜಿಯ ಪ್ರತಿಯನ್ನು ಡಿಕೆ ಶಿವಕೀಲರಿಗೆ ಸಲ್ಲಿಸಲು ಇದೇ ವೇಳೆ ಸೂಚನೆ ನೀಡಲಾಯಿತು.ತನಿಖೆ ಹೊಣೆ ಲೋಕಾಯುಕ್ತ ಪೊಲೀಸ್ ರಿಗೆ ವರ್ಗಾಯಿಸಿದರು ನೋಟಿಸ್ ನೀಡಲಾಗಿದೆ.
ಸಿಬಿಐ ನೋಟಿಸ್ ನೀಡುತ್ತಿದೆ ಎಂದು ಡಿಕೆ ಪರ ಅಭಿಷೇಕ್ ಮನು ಸಿಂಗ್ಥ್ವಿ ವಾದಿಸಿದ್ದಾರೆ.ಸಿಬಿಐ ಅರ್ಜಿಗೆ ಅಕ್ಷೇಪಣೆಗಳಿದ್ದರೆ ಸಲ್ಲಿಸಲು ಹೈಕೋರ್ಟ್ ಇದೀಗ ಸೂಚನೆ ನೀಡಿದೆ. ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ 12ಕ್ಕೆ ಹೈಕೋರ್ಟ ವಿಬಾಗಿಯ ಪೀಠ ಮುಂದೂಡಿದೆ.