ವಿಜಯಪುರ : ‘ನಡೆದಾಡುವ ದೇವರು’ ಎಂದೇ ಖ್ಯಾತಿ ಗಳಿದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ಸಂಗ್ರಹ ಕಾರ್ಯ ಮುಗಿದಿದ್ದು, ಐದು ಮಡಿಕೆಗಳಲ್ಲಿ ಚಿತಾಭಸ್ಮ ಸಂಗ್ರಹ ಮಾಡಲಾಗಿದೆ ಎಂದು ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀ ಹೇಳಿದ್ದಾರೆ.
ನಾಳೆ ಹುಣ್ಣಿಮೆ ಇರುವುದರಿಂದ ಅಸ್ಥಿ ವಿಸರ್ಜನೆ ಮಾಡಲಾಗುವುದಿಲ್ಲ, ನಾಡಿದ್ದು ಜ.7 ರಂದು ಶ್ರೀಗಳ ಆಶಯದಂತೆ ಕೂಡಲಸಂಗಮದಲ್ಲಿ ಶ್ರೀಗಳ ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.ಶ್ರೀಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಿಲ್ಲ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ಯಾರೂ ನದಿ ಹಾಗೂ ಸಾಗರದಲ್ಲಿ ವಿಸರ್ಜನೆ ಮಾಡಲು ಇಚ್ಛೆಪಡುತ್ತಾರೋ ಅವರು ಹೆಸರು ನೋಂದಾಯಿಸುವಂತೆಯೂ ಕೂಡಾ ಹೇಳಿದ್ದರು. ಆದರೆ, ಯಾವುದೇ ಭಕ್ತರಿಗೆ ಶ್ರೀಗಳ ಚಿತಾಭಸ್ಮವನ್ನು ನೀಡುವುದಿಲ್ಲ. ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿ ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು ಎಂದು ನಿನ್ನೆ ರಾತ್ರಿ ನಡೆದ ಅಂತ್ಯಕ್ರಿಯೆಯ ವೇಳೆ ಕನ್ಹೇರಿ ಮಠದ ಸ್ವಾಮೀಜಿ ಹೇಳಿದ್ದಾರೆಂದು ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ ನೀಡಿದ್ದರು.
BIGG NEWS : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ : ಟ್ಯಾಬ್ ವಿತರಣೆಗೆ ಅರ್ಜಿ ಅಹ್ವಾನ
BIGG NEWS : ಇಂದಿನಿಂದ ಎರಡು ದಿನ `ಜೆ.ಪಿ. ನಡ್ಡಾ’ ಕರ್ನಾಟಕ ಪ್ರವಾಸ : ಇಲ್ಲಿದೆ ಮಾಹಿತಿ