ಬೆಂಗಳೂರು: ಧರ್ಮಸ್ಥಳದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಅಹೋರಾತ್ರ ಆಲಿಯಾಸ್ ನಟೇಶ್ ಪೊಲಿಪಲ್ಲಿ ಎಂಬಾತನಿಗೆ 15 ದಿನಗಳ ಸಿವಿಲ್ ಸೆರೆವಾಸದ ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶಿಸಿದೆ.
ಧರ್ಮಸ್ಥಳದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆಯನ್ನು ಅಹೋರಾತ್ರಾ ಆಲಿಯಾಸ್ ನಟೇಶ್ ಪೊಲಿಪಲ್ಲಿ ಎಂಬುವರು ನೀಡಿದ್ದಾಗಿ ಬೆಂಗಳೂರಿನ 11ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಶೀನಪ್ಪ ಎಂಬುವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ನಿರ್ಬಂಧಕಾಜ್ಞೆ ಉಲ್ಲಂಘಿಸಿ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ ಎಂಬುದಾಗಿ ಉಲ್ಲೇಖಿಸಲಾಗಿತ್ತು.
ಅವಹೇಳನಕಾರಿ ಹೇಳಇಕೆ ನೀಡದಂತೆ ಕೋರ್ಟ್ ನಿರ್ಬಂಧಿಸಿತ್ತು. ವೀಡಿಯೋ ಡಿಲೀಟ್ ಮಾಡುವಂತೆ ಆದೇಶಿಸಿದ್ದರೂ ಪಾಲಿಸಿರಲಿಲ್ಲ. ಕೋರ್ಟ್ ಆದೇಶ ಅವಗಣನೆ ಮಾಡಿದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿದೆ. 15 ದಿನಗಳ ಸೆರೆವಾಸದ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.
BREAKING: ಗಣೇಶ ಹಬ್ಬ ಆಚರಣೆ ಹಿನ್ನಲೆ: ಬೆಂಗಳೂರು ದಕ್ಷಿಣ ಜಿಲ್ಲೆಯಾಧ್ಯಂತ ಪಟಾಕಿ ನಿಷೇಧಿಸಿ ಡಿಸಿ ಆದೇಶ
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ