ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹೆಚ್ಚು ಕಲಾವಿದರು ಭಾಗವಹಿಸದಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬೇಸರ ಹೊರಹಾಕಿ ಯಾರಿಗೆ ಎಲ್ಲಿ ನಟ್ಟು ಬೋಲ್ಟ್ ಸರಿ ಮಾಡಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಹೇಳಿಕೆ ನೀಡಿದರು. ಇದೀಗ ಈ ಹೇಳಿಕೆಗೆ ನಿರ್ದೇಶಕ ಟಿಎಸ್ ನಾಗಾಭರಣ ಆಕ್ರೋಶ ಅವರ ಹಾಕಿದ್ದು ಡಿಕೆ ಶಿವಕುಮಾರ್ ಅವರು ಅಂತಹ ಸಂಸ್ಕಾರಕ್ಕೆ ಒಗ್ಗಿ ಹೋಗಿದ್ದಾರೆ ಎಂದು ಕಿಡಿ ಕಾರಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚಿತ್ರರಂಗದವರಿಗೆ ಡಿಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್ ನೀಡಿದ ವಿಚಾರವಾಗಿ ನಿರ್ದೇಶಕ ಟಿ.ಎಸ್ ನಾಗಾಭರಣ ಆಕ್ರೋಶ ಅವರ ಹಾಕಿದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆ ಅವರ ಸಂಸ್ಕಾರ ತೋರಿಸುತ್ತದೆ. ಡಿಕೆ ಶಿವಕುಮಾರ್ ಆ ಸಂಸ್ಕಾರಕ್ಕೆ ಒಗ್ಗಿ ಹೋಗಿದ್ದಾರೆ.ಅಷ್ಟು ದೊಡ್ಡ ವೇದಿಕೆಯಲ್ಲಿ ಹಾಗೆ ಮಾತನಾಡಿದ್ದು ತಪ್ಪು ಡಿಸಿಎಂ ಡಿಕೆ ಹೇಳಿಕೆಯಿಂದ ಯಾರಿಗೂ ಏನು ಆಗಿಲ್ಲ. ಕನ್ನಡ ಚಿತ್ರರಂಗದಲ್ಲಿರುವ ಪ್ರತಿಯೊಬ್ಬನು ನಾಯಕನೇ ರಾಜಕೀಯಕ್ಕೆ ಸಿನಿಮಾ ತರಬೇಡಿ ಸಿನಿಮಾಗೆ ರಾಜಕೀಯ ತರಬೇಡಿ ಎಂದು ನಿರ್ದೇಶಕ ನಾಗಾಭರಣ ತಿಳಿಸಿದರು.