ಬೆಂಗಳೂರು : ನಟಿ ರಾಣಿ ಮಾಡಿರುವ ಅಶ್ಲೀಲ ವಿಡಿಯೋ ಆರೋಪ ಸುಳ್ಳು, ನಟಿ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಹೇಳಿದ್ದಾರೆ.
ಕನ್ನಡ ಸಿನಿಮಾ ರಂಗದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರು ನಟಿಯರಿಗೆ ಆಶ್ಲೀಲ ಸಂದೇಶ ಕಳುಹಿಸುತ್ತಾರೆ ಹಾಗೂ ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ನಟಿ ಮತ್ತು ಸಂಘದ ಉಪಾಧ್ಯಕ್ಷರಾದ ರಾಣಿ ಗಂಭೀರ ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ಡಿಂಗ್ರಿ ನಾಗರಾಜ್ ರಾಣಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಿದ್ದೇಮ,ಎ. ಪೋಷಕ ಕಲಾವಿದರ ಸಂಘದ ಹಣ ದುರುಪಯೋಗ ಮಾಡಿಲ್ಲ. ಅವರು ಸಂಘದ ಆವರಣದಲ್ಲಿ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ಶುರು ಮಾಡಿದ್ರು. ಹಾಗಾಗಿ ಅವರನ್ನು ಸಂಘದಿಂದ ಉಚ್ಚಾಟನೆ ಮಾಡಿದ್ದೇವೆ. ಈಗ ನಾವು ಕಾರ್ಯಕ್ರಮ ಮಾಡ್ತಿದ್ದಿವಿ. ಅದನ್ನು ವಿರೋಧಿಸೋಕೆ ಈ ತರಹ ಆರೋಪ ಮಾಡಿದ್ದಾರೆ. ನಟಿ ರಾಣಿ ಮಾಡಿರುವ ಅಶ್ಲೀಲ ವಿಡಿಯೋ ಆರೋಪ ಸುಳ್ಳು, ನಟಿ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಹೇಳಿದ್ದಾರೆ.
ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಅವರ ವರ್ತನೆ ಸರಿಯಿಲ್ಲ ಎಂದು ನಟಿ ರಾಣಿ ಆರೋಪ ಮಾಡಿದ್ದು, ಸಂಘದ ಮಹಿಳಾ ಸದಸ್ಯರಿಗೆ ಮುಜುಗರ ಆಗುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ .ಈ ಹಿಂದೆ ಇದ್ದ ಉಪಾಧ್ಯಕ್ಷೆಗೆ ಆಡುಗೋಡಿ ಶ್ರೀನಿವಾಸ್ ಅವರು ಬ್ಲ್ಯೂ ಫಿಲ್ಮ್ ಕಳಿಸುತ್ತಿದ್ದರು. ಇದರಿಂದ ನಮಗೆ ಬಹಳ ನೋವಾಗಿದೆ.
ಮೀಟಿಂಗ್ನಲ್ಲಿ ಕೂಡ ಈ ವಿಚಾರ ಪ್ರಸ್ತಾಪ ಆದಾಗ ದೊಡ್ಡ ಗಲಾಟೆ ಆಗಿತ್ತು. ಕೊನೆಗೆ ಸಂಘದ ಹೆಸರು ಹಾಳಾಗುತ್ತೆ ಎಂದು ಕಾಂಪ್ರಮೈಸ್ ಮಾಡಿದ್ದರು. ಆದರೆ ಪದೇ ಪದೇ ಅದೇ ಕೆಲಸ ಮಾಡಿದ್ರೆ ನಮಗೆ ಬಹಳ ನೋವಾಗುತ್ತದೆ. ಸಂಘದ ಮಹಿಳಾ ಸದಸ್ಯರಿಗೆ ಮುಜುಗರ ಆಗುತ್ತದೆ ಎಂದು ರಾಣಿ ಆರೋಪಿಸಿದ್ದಾರೆ.
ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ : ಬಾಗಲಕೋಟೆ -ವಿಜಯಪುರದಲ್ಲಿ ಹೆದ್ದಾರಿ ಬಂದ್