ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಹೊಸ ವಿವಾದದ ಅಲೆ ಎದ್ದಿದ್ದು, ಕನ್ನಡ ಸಿನಿಮಾ ರಂಗದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರು ನಟಿಯರಿಗೆ ಆಶ್ಲೀಲ ಸಂದೇಶ ಕಳುಹಿಸುತ್ತಾರೆ ಹಾಗೂ ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ನಟಿ ಮತ್ತು ಸಂಘದ ಉಪಾಧ್ಯಕ್ಷರಾದ ರಾಣಿ ಗಂಭೀರ ಆರೋಪ ಮಾಡಿದ್ದಾರೆ.
ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಅವರ ವರ್ತನೆ ಸರಿಯಿಲ್ಲ ಎಂದು ನಟಿ ರಾಣಿ ಆರೋಪ ಮಾಡಿದ್ದು, ಸಂಘದ ಮಹಿಳಾ ಸದಸ್ಯರಿಗೆ ಮುಜುಗರ ಆಗುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಇದ್ದ ಉಪಾಧ್ಯಕ್ಷೆಗೆ ಆಡುಗೋಡಿ ಶ್ರೀನಿವಾಸ್ ಅವರು ಬ್ಲ್ಯೂ ಫಿಲ್ಮ್ ಕಳಿಸುತ್ತಿದ್ದರು. ಇದರಿಂದ ನಮಗೆ ಬಹಳ ನೋವಾಗಿದೆ. ಮೀಟಿಂಗ್ನಲ್ಲಿ ಕೂಡ ಈ ವಿಚಾರ ಪ್ರಸ್ತಾಪ ಆದಾಗ ದೊಡ್ಡ ಗಲಾಟೆ ಆಗಿತ್ತು. ಕೊನೆಗೆ ಸಂಘದ ಹೆಸರು ಹಾಳಾಗುತ್ತೆ ಎಂದು ಕಾಂಪ್ರಮೈಸ್ ಮಾಡಿದ್ದರು. ಆದರೆ ಪದೇ ಪದೇ ಅದೇ ಕೆಲಸ ಮಾಡಿದ್ರೆ ನಮಗೆ ಬಹಳ ನೋವಾಗುತ್ತದೆ. ಸಂಘದ ಮಹಿಳಾ ಸದಸ್ಯರಿಗೆ ಮುಜುಗರ ಆಗುತ್ತದೆ ಎಂದು ರಾಣಿ ಆರೋಪಿಸಿದ್ದಾರೆ.
“ಆಪರೇಷನ್ ಕಮಲ’ದ ಮುಂದುವರಿದ ಭಾಗವಾದ “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’-ಸಿದ್ದರಾಮಯ್ಯ ಕಿಡಿ