ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಕೇವಲ 15 ದಿನದ ಹಿಂದಷ್ಟೇ ಎಸ್ ಸಿ/ಎಸ್ ಟಿ ಸಮುದಾಯದ ಬಿಪಿಎಲ್ ಕಾರ್ಡ್ದಾರರಿಗೆ 75 ಯುನಿಟ್ ಉಚಿತ ವಿದ್ಯುತ್ ಯೋಜನೆ ಘೋಷಿಸಿ ಈಗ ಏಕಾಏಕಿ ಹಿಂಪಡೆದಿರುವ ಕುರಿತಂತೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದರೆ.
ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಬಿಜೆಪಿ ಸರ್ಕಾರ ಕೇವಲ 15 ದಿನದ ಹಿಂದಷ್ಟೇ SC/ST ಸಮುದಾಯದ BPL ಕಾರ್ಡ್ದಾರರಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆ ಘೋಷಿಸಿ ಈಗ ಏಕಾಏಕಿ ಹಿಂಪಡೆದಿದೆ. ಬೊಮ್ಮಾಯಿ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ನಾಟಕ ಯಾಕೆ ಆಡಬೇಕು? ಕೊಟ್ಟ ಮಾತನ್ನೂ ಉಳಿಸಿಕೊಳ್ಳುವ ಬದ್ಧತೆ ಈ ಸರ್ಕಾರಕ್ಕಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
BIGG NEWS: ಮೈಸೂರಿನಲ್ಲಿ ಮೇಯರ್, ಉಪಮೇಯರ್ ಚುನಾವಣೆ; ಕಾಂಗ್ರೆಸ್ ನಿಂದ ಹೊಸ ರಣತಂತ್ರ
ಉಚಿತ ವಿದ್ಯುತ್ಗಾಗಿ SC/ST ಸಮುದಾಯದವರೂ ಈ ಸರ್ಕಾರಕ್ಕೇನು ಅರ್ಜಿಯೂ ಹಾಕಿರಲಿಲ್ಲ, ಭಿಕ್ಷೆಯೂ ಬೇಡಿರಲಿಲ್ಲ. ಸ್ವತಃ ಸರ್ಕಾರವೇ 75ಯೂನಿಟ್ ಉಚಿತ ವಿದ್ಯುತ್ ಯೋಜನೆ ಘೋಷಿಸಿ, ಈಗ ಸದ್ದೇ ಇಲ್ಲದೆ ವಾಪಾಸ್ ಪಡೆದಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ರಾಜಧರ್ಮ. ಈ ಬೊಮ್ಮಾಯಿ ಸರ್ಕಾರಕ್ಕೆ ತನ್ನ ಮಾತಿನ ಮೇಲೇ ನಿಲ್ಲುವ ಯೋಗ್ಯತೆಯಿಲ್ಲ ಎಂದು ಕಿಡಿಕಾರಿದ್ದಾರೆ.