ಮೈಸೂರು: ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಓಪಿಡಿ ಚೀಟಿ ಪಡೆದು, ವೈದ್ಯರು ನೀಡೋ ಚಿಕಿತ್ಸೆ ಪಡೆದು, ಮನೆಗೆ ರೋಗಿಗಳು ವಾಪಾಸ್ ಆಗ್ತಾ ಇದ್ರು. ಇನ್ಮುಂದೆ ಇದರ ಜೊತೆಗೆ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ರೋಗಿಗಳ ರೆಕಾರ್ಡ್ ಎಲ್ಲಾ ಕಡೆ ಸಿಗೋ ಹಾಗೆ ಆಗಲಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ದಾಖಲೆಗಳ ಡಿಜಿಟಲ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆಸ್ಪತ್ರೆಗೆ ಹೋಗೋ ರೋಗಿಗಳ ಪ್ರತಿಯೊಂದು ರಿಪೋರ್ಟ್ ಅದರಲ್ಲಿ ಲಭ್ಯವಾಗಲಿದೆ. ಹೀಗಾಗಿ ರೋಗಿಗಳಿಗೆ ಚಿಕಿತ್ಸೆ ನೀಡೋದಕ್ಕೂ ಸುಲಭವಾಗುತ್ತಿತ್ತು.
ಇದೀಗ ರಾಜ್ಯದಲ್ಲೂ ಇದೇ ಮಾದರಿಯಲ್ಲಿ ವೈದ್ಯಕೀಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗೆ ತೆರಳೋ ರೋಗಿಗಳಿಗೆ ಚಿಕಿತ್ಸೆ ನೀಡೋ ಪ್ರತಿಯೊಂದು ರಿಪೋರ್ಟ್ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲೂ ಲಭ್ಯವಾಗೋ ತರ ಆಗಲಿದೆ.
ಆರಂಭದಲ್ಲಿ ಪ್ರಾಯೋಗಿಕವಾಗಿ ಮೈಸೂರು, ಬೆಳಗಾವಿ ಮತ್ತು ಉಡುಪಿ ಜಿಲ್ಲೆಯಲ್ಲಿ ಮಕ್ರೋಸೈಟ್ ಮೂಲಕ ಜಾರಿಗೊಳಿಸಲಾಗುತ್ತಿದೆ. ಈ ಬಳಿಕ ಇತರೆ ಜಿಲ್ಲೆಗಳಿಗೂ ವಿಸ್ತರಣೆ ಆಗಲಿದೆ.
ರಾಜ್ಯ ಆರೋಗ್ಯ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಸಹಯೋಗದೊಂದಿಗೆ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮೈಸೂರಿನಲ್ಲಿ ಚಾಲನೆ ನೀಡಿದ್ದಾರೆ.
‘ರೈಲ್ವೆ ಪ್ರಯಾಣಿಕ’ರಿಗೆ ಮಹತ್ವದ ಮಾಹಿತಿ: ಈ ರೈಲುಗಳ ‘ಸಂಚಾರ’ ರದ್ದು, ‘ಮಾರ್ಗ’ ಬದಲಾವಣೆ
BREAKING : ICICI ಬ್ಯಾಂಕ್ ಮಾಜಿ ಸಿಇಒ ‘ಚಂದಾ ಕೊಚ್ಚಾರ್’ ಬಂಧನ ‘ಕಾನೂನು ಬಾಹಿರ’ : ಬಾಂಬೆ ಹೈಕೋರ್ಟ್