ಮೈಸೂರು : ಸಂವಿಧಾನ ಅವರೊಬ್ಬರೇ ಮಾಡಿದ್ದಾರಾ ಮತ್ಯಾರು ಮಾಡಿಲ್ವಾ? ಅಂತ ಕೇಳ್ತಾರೆ ಹಾಗಾದ್ರೆ ನಿಮ್ ತಾತ ಬಂದು ಮಾಡಿದ್ನಾ ? ನಿಮ್ಮ ಆರ್ ಎಸ್ ಎಸ್ ದವರು ಬಂದ್ ಮಾಡಿದ್ರ? ಯಾರು ಮಾಡಿದರು? ಇದೆಲ್ಲವನ್ನು ಕೂಡ ಎಷ್ಟೇ ಕಷ್ಟ ಬಂದರೂ ಕೂಡ ಬದಲಾಯಿಸಲು ಆಗಲ್ಲ. ಸಂವಿಧಾನ ಸಮಿತಿಯಲ್ಲಿ 7 ಜನ ಸದಸ್ಯರಿದ್ದರು. ಆ ಸದಸ್ಯರು ಎಲ್ಲರೂ ಹೇಳುತ್ತಾರೆ ಈ ದೇಶದ ಸಂವಿಧಾನವನ್ನು ರೂಪಿಸೋದಕ್ಕೆ ಮುಖ್ಯ ಕಾರಣೀಕರ್ತರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಂತ ಹೇಳಿ ಹೇಳುತ್ತಾರೆ. ಮೋದಿ ಅವರೇ ಆ ಸಂವಿಧಾನದಿಂದಲೇ ನೀವು ಮುಖ್ಯಮಂತ್ರಿ ಆದರೆ ಆ ಸಂವಿಧಾನದಿಂದಲೇ ನೀವು ಪ್ರಧಾನ ಮಂತ್ರಿ ಆಗಿದ್ದೀರಾ ಸಂವಿಧಾನ ತಮ್ಮ ಪಾರ್ಲಿಮೆಂಟ್ ಒಳಗಡೆ ಹೋಗುವಾಗ ಸಂವಿಧಾನಕ್ಕೆ ತಲೆಬಾಗಿ ಹಣೆಗೆ ಹಚ್ಚಿಕೊಂಡು ಒಳಗಡೆ ಹೋಗುತ್ತೀರಾ ಅದೇ ಸಂವಿಧಾನದ ಕೊಲೆ ಇವರು ಮೋದಿ ಅವರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಯಾವಾಗಲೂ ಟೀಕಾಚಾರ್ಯರು. ಯಾವುದೇ ಅಭಿವೃದ್ಧಿ ಕೆಲಸ ಅವರು ಮಾಡೋದಿಲ್ಲ ಅವರ ಮಾಡೋದು ಬರೀ ಭ್ರಷ್ಟಾಚಾರ ಆದರೆ ಬೇರೆಯವರಿಗೆ ಹೇಳುತ್ತಾರೆ ಅವರು ಭ್ರಷ್ಟಾಚಾರ ಇವರ ಭ್ರಷ್ಟಾಚಾರ ಕಾಂಗ್ರೆಸ್ ಸರ್ಕಾರ ಏನ್ ಕೆಲಸ ಮಾಡಿದೆ ಮೋದಿಯವರು ಕೂಡ ಹೇಳುತ್ತಾರೆ ಪಚ್ಪನ್ ಸಾಲ್ಮೆ ಕಾಂಗ್ರೆಸ್ ನೇ ಕ್ಯಾ ಕಿಯ? ಅಂತ ಹೇಳುತ್ತಾರೆ.ನಾವೇನು ಮಾಡಿದ್ದೇವೆ ಜನರ ಕಣ್ಣು ಹೊಂದಿದೆ ಜನ ನೋಡುತ್ತಿರುತ್ತಾರೆ ನೀವು ಏನ್ ಮಾಡಿದ್ದೀರಾ ಅದನ್ನ ಹೇಳಿ ಪಂಡಿತ್ ಜವರಹಲ್ ನೆಹರು ಅವರ ಕಾಲದಲ್ಲಿ ಎಚ್‌ಎಮ್‌ಟಿ ಹೆಚ್ಎಎಲ್ ಬಿ, ಎಲ್ ಬಿ ಎಚ್ ಎಲ್ ದೊಡ್ಡ ದೊಡ್ಡ ಕಾರ್ಖಾನೆಗಳು ನೆಹರು ಜಿ ಅವರು ಮೈಸೂರು ಮತ್ತು ಬೆಂಗಳೂರಿಗೆ ಕೊಟ್ಟರು.ಮಹಾರಾಜರ ಕಾಲದಲ್ಲಿ ಕೂಡ ಇಲ್ಲೇ ಸಾಕಷ್ಟು ಸಾರ್ವಜನಿಕ ಉದ್ದಿಮೆಗಳಲ್ಲಿ ಬಂದವು.
ಮೋದಿ ಸಾಹೇಬರೇ ಮತ್ತು ಮೋದಿ ಶಿಷ್ಯಂದಿರು ಏನು ಇದ್ದಾರೆ ನೀವು ಹೇಳಿ ನಿಮ್ಮ ಕೊಡುಗೆ ಮೈಸೂರಿಗೆ ಏನು ಬೆಂಗಳೂರಿಗೆ ಏನು ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದೀರಾ ಎಂದು ನೀವು ತಿಳಿಸಬೇಕು ಎಂದು ಖರ್ಗೆ ಹೇಳಿದರು. ನಿಮ್ಮದು ಏನು ಕೊಡುಗೆ ಇಲ್ಲ ಆದರೆ ಹೇಳುವುದು ಮಾತ್ರ ಜಾಸ್ತಿ ಅವರು ವಿಶೇಷವಾಗಿ ಏನ್ ಮಾಡ್ತಾರೆ ಟಿವಿಯಲ್ಲಿ ಮಾತ್ರ ಕಾಣೋದು. ಹಿಂದೆ ಪ್ರಧಾನಮಂತ್ರಿಗಳು ಕೂಡ ದೂರದರ್ಶನವಿದ್ದರು ಸರ್ಕಾರ ಸ್ವತ್ತಿದೆ, ಟಿವಿ ಇದ್ದರು ಯಾರು ಕೂಡ ದಿನ ಎದ್ದು ಇವರ ಹಾಗೆ ಟಿವಿಯಲ್ಲಿ ಬೊಗಳುತ್ತಾ ಇರಲಿಲ್ಲ.
ಇವರು ದಿನಾ ಎದ್ದು ಟಿವಿ ಅಲ್ಲಿ ಅಷ್ಟೆ ಮಾತನಾಡುತ್ತಾರೆ. ನಮ್ಮ ದೇಶದಲ್ಲಿ ಮಣಿಪುರ ಭಾಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅನೇಕ ಅಮಾಯಕ ಜನರ ಮನೆಗಳು ಸುಟ್ಟು ಹೋಗಿದ್ದು, ಆಸ್ತಿಗಳನ್ನ ಕಳೆದುಕೊಂಡಿದ್ದಾರೆ, ಮಕ್ಕಳು ಕಳೆದುಕೊಂಡಿದ್ದಾರೆ ಅಲ್ಲಿ ಕೇಂದ್ರ ಸರ್ಕಾರ ಬಿಜೆಪಿ ಸರ್ಕಾರ ಏನು ಮಾಡಿಲ್ಲ. ಆದರೆ 42 ದೇಶ ಮೋದಿ ಅವರು ಅಡ್ಡಾಡಿದ್ದಾರೆ. 42 ದೇಶಕ್ಕೆ ಹೋಗಿದ್ದಾರೆ ಇಲ್ಲೇ ಪಕ್ಕದಲ್ಲಿ ಮಣಿಪುರ ಇದೆ ನಮ್ಮ ದೇಶದಲ್ಲಿರುವ ಮಣಿಪುರಕ್ಕೆ ಅಲ್ಲಿ ಇವರು ಒಂದು ದಿವಸವು ಕೂಡ ಹೋಗದೆ ಜನರಿಗೆ ಸಮಾಧಾನ ಮಾಡಲಿಲ್ಲ ಕಾಳಜಿಯಿಂದ ಸಂತೈಸಲಿಲ್ಲ. ಕಾರಣ ಏನು ಅಲ್ಲಿ ಹೋಗೋದಕ್ಕೆ ಹೆದರುತ್ತಿದ್ದಾರಾ?
ರಾಹುಲ್ ಗಾಂಧಿಯವರು ಮಣಿಪುರಕ್ಕೆ ಎರಡು ಬಾರಿ ಭೇಟಿ ನೀಡಿದರು ಮಣಿಪುರದಿಂದಲೇ ಅವರು ಎರಡನೇ ಪಾದಯಾತ್ರೆ ಆರಂಭಿಸಿದರು. ಆದರೆ ಮೋದಿಯವರು ದೇಶದ ಜನ ಸಾಯುವಾಗ ಇವರು ವಿದೇಶದಲ್ಲಿ ಟೂರ್ ಮಾಡುತ್ತಿದ್ದರು. ದೊಡ್ಡ ದೊಡ್ಡ ಪಬ್ಲಿಕ್ ಸೆಂಟರ್ ಮಹಾರಾಜರ ಕಾಲದಲ್ಲಿ ಆಗಿವೆಯೋ ನೆಹರುಜಿ ಅವರ ಕಾಲದಲ್ಲಿ ಏನು ಆಗಿದೆಯೋ ಅವೆಲ್ಲವನ್ನು ಒಂದೊಂದು ಆದಾನಿ ಅಂಬಾನಿ ಇವರಿಗೆ ಮಾರುತ್ತಿದ್ದಾರೆ. ಅದು ನಿಮ್ಮ ಆಸ್ತಿ, ನಮ್ಮ ನಿಮ್ಮ ಆಸ್ತಿ ನಮ್ಮ ಟ್ಯಾಕ್ಸ್ ಮೇಲೆ ಕಟ್ಟಿದಂತಹ ದೊಡ್ಡ ದೊಡ್ಡ ಕಾರ್ಖಾನೆಗಳು ಇವತ್ತು ಆ ಕಾರ್ಮಿಕರಿಗೆ ಬೀದಿಪಾಲು ಮಾಡಿ ಆ ಆಸ್ತಿಯನ್ನು ಮಾರಿ ಒಬ್ಬನಿಗೆ ಶ್ರೀಮಂತ ಮಾಡಲು ಏರ್ಪೋರ್ಟ್, ರಸ್ತೆ, ವಿಮಾನ ಎಲ್ಲವನ್ನು ಕೂಡ ತನಗೆ ಬೇಕಾದಂತ ಜನರಿಗೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನ ತಿದ್ದುಪಡಿ ಮಾಡಬೇಕು ಅಥವಾ ಸಂವಿಧಾನಕ್ಕೆ ಪುನಃ ಬರೀಬೇಕು ಅನ್ನುವಂತಹ ಮಾತು ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡಲಾಗುವುದಿಲ್ಲ ಜನರು ಮಾಡೋಕೆ ಬಿಡಲ್ಲ. ಸಂವಿಧಾನ ಬದಲಾವಣೆ ಮಾಡೋಕೆ ನೀವು ಅವಕಾಶ ಕೊಟ್ಟರೆ ನೀವು ಸತ್ರಿ ನಿಮಗೆ ಏನು ಹಕ್ಕು ಇರುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜವರಲಾಲ್ ನೆಹರು ಅನೇಕ ಸದಸ್ಯರು ಸೇರಿ ಸಂವಿಧಾನ ತಯಾರು ಮಾಡಿದ್ದಾರೆ. ನೀವು ಅದಕ್ಕೆ ತೆಗೆದು ಹಾಕುವುದಕ್ಕೆ ಪ್ರಯತ್ನ ಮಾಡುತ್ತಿದ್ದೀರಾ? ಎಂದು ವಾಗ್ದಾಳಿ ನಡೆಸಿದರು.