ಬೆಂಗಳೂರು: ನನ್ನ ದುಬಾರಿ ವಾಚ್ ಬಗ್ಗೆ ಬಿಜೆಪಿಯವರು ( BJP ) ಕೇಳುತ್ತಾರೆ ಅಂತ, ನೀವು ಕೇಳ್ತಿರಲ್ಲಯ್ಯ.? ಅದೇ ಮೋದಿ ಕೋಟ್ ಹಾಕಿದ್ರಲ್ಲ ಕೋಟಿ ರೂಪಾಯಿದು ಅದನ್ನು ಕೇಳಿದ್ರಾ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ), ಕೆಂಡಾಮಂಡಲವಾದಂತ ಪ್ರಸಂಗ ಇಂದು ನಡೆದಿದೆ.
ಇಂದು ಬಿಜೆಪಿ ನಾಯಕರಿಂದ ದುಬಾರಿ ವಾಚ್ ಆರೋಪ ವಿಚಾರವಾಗಿ ಮಾಧ್ಯಮದವರ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲವಾದರು. ಥೂ.. ಅವರು ಕೇಳ್ತಾರೆ ಅಂತ ನೀವು ಕೇಳ್ತಿರಲ್ರಿ ಸಿಲ್ಲಿ. ಮೋದಿ ಕೋಟ್ ಹಾಕಿದ್ರಲ್ಲ ಕೋಟಿ ರೂಪಾಯಿದು ಅದನ್ನು ಕೇಳಿದ್ರಾ ? ಎಂದು ಪ್ರಶ್ನಿಸಿದರು.
ಭಟ್ಕಳದಲ್ಲಿ ‘ಟಿಪ್ಪು ಸುಲ್ತಾನ್’ ಹೆಸರಿನಲ್ಲಿ ಸ್ವಾಗತ ಗೋಪುರ ವಿವಾದ: ಬೂದಿ ಮುಚ್ಚಿದ ಕೆಂಡವಾದ ‘ಕರಾವಳಿ’
ಇಂಥದ್ದಕ್ಕೆಲ್ಲ ನೀವು ಕೇಳಲೂ ಬಾರದು ನಾನು ಹೇಳುವುದೂ ಇಲ್ಲ. ಅಂಗಿ ಹಾಕುತ್ತಾರೆ, ಚಡ್ಡಿ ಹಾಕುತ್ತಾರೆ ಅಂತೆಲ್ಲ ಕೇಳ್ತಿರಲ್ಲ. ಇಂಥ ಸಿಲ್ಲಿ ಕ್ವಶ್ಚನ್ಸ್ ಎಲ್ಲ ಅವರು ಹೇಳ್ತಾರೆ ಅಂತ ಕೇಳ್ತೀರಲ್ಲರೀ ನೀವು ಥೂ ಎಂಬುದಾಗಿ ಗರಂ ಆಗಿ ಮಾತನಾಡಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಹೈಕಮಾಂಡ್ ಗೆ ಸರ್ವಾನುಮತದ ನಿರ್ಣಯ ಮಂಡನೆ ಮುಕ್ತಾಯ ಮಾಡಲಾಯಿತು. ಈ ಬಳಿಕ ಮಾತನಾಡಿದಂತ ಅವರು, ಸರ್ವಾನುಮತದಿಂದ ಎಲ್ಲ ಪಿಸಿಸಿ ಸದಸ್ಯರುಗಳು ಒಕ್ಕೊರಲಿನಿಂದ ಸೋನಿಯಾ ಗಾಂಧಿಯವರಿಗೆ ಅಧಿಕಾರ ನೀಡಲಾಗಿದೆ. ಎಐಸಿಸಿ ಸದಸ್ಯರು ಪಿಸಿಸಿ ಸದಸ್ಯರು ಪಿಸಿಸಿ ಅಧ್ಯಕ್ಷರ ಆಯ್ಕೆಗೆ ಸರ್ವಾನುಮತದಿಂದ ನಿರ್ಣಯ ಮಾಡಿದ್ದೇವೆ. ಸೋನಿಯಾ ಗಾಂಧಿ ನಾಮಿನೇಟ್ ಮಾಡ್ತಾರೆ ಎಂದರು.
BREAKING: ಮಡಿಕೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ