ಮಂಡ್ಯ : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಹಿರಂಗ ಸಭೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿಮಗೇನು ದಾರಿದ್ರ್ಯ ಬಂದಿತ್ತಾ? ನಿಮಗೆ ಜ್ಞಾನ ಬೇಡವೇ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇಂದು ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಆಗಿರುವ ನಿಮಗೆ ಜ್ಞಾನ ಬೇಕಲ್ಲ. ಗಬ್ಬು ಹಿಡಿದಿರುವ ಮುಡಾದಲ್ಲಿ ಯಾಕೆ ಸೈಟ್ ಬರಿಸಿಕೊಂಡಿರಿ. ದಲಿತ ಕುಟುಂಬದಿಂದ ಹೇಗೆ ಸೈಟ್ ಬರಿಸಿಕೊಂಡಿದ್ದೀರಿ. ಸಿಎಂ ಆಗಿ ಅವರ ಆಸ್ತಿಯನ್ನು ನೀವು ಕಬಳಿಸಿದ್ದೀರಾ. ಇದು ನ್ಯಾಯನಾ ಎಂದು ಪ್ರಶ್ನೆ ಮಾಡಿದ್ದಾರೆ.
ಸತ್ತಿರುವವನ ಹೆಸರಿಗೆ ಡಿ ನೋಟಿಫಿಕೇಷನ್ ಮಾಡಿಸಿದ್ದಾರೆ. ಇದರ ಪ್ರತಿ ಹಂತದಲ್ಲೂ ಸಿದ್ದರಾಮಯ್ಯ ಅವರ ಪಾತ್ರ ಇದೆ. ಜಮೀನು ಐದು ಲಕ್ಷಕ್ಕೆ ಪಡೆದು ಇದೀಗ 62 ಕೋಟಿ ಕೇಳುತ್ತಿದ್ದಾರೆ. ಇದು ಪಾದಯಾತ್ರೆ ಅಲ್ಲ, ಜನಯಾತ್ರೆ ಆಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಮುಹೂರ್ತ ಫಿಕ್ಸ್ ಆಗಿದೆ. ಕುಂಕುಮಕ್ಕೆ 7, ಅರಿಶಿನಕ್ಕೆ 7 ಸೈಟ್ ಕೊಟ್ಟಿದ್ದಾರೆ. ನಿಮಗೆ ದಾರಿದ್ರ್ಯ ಬಂದಿತ್ತಾ. ನಿಮಗೆ ಜ್ಞಾನ ಬೇಡವೇ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯಗೆ ಬೆನ್ನಿಗೆ ಚೂರಿ ಹಾಕುವವರು ಪಕ್ಕದಲ್ಲೇ ಕುಳಿತಿದ್ದಾರೆ. ಕಾಂಗ್ರೆಸ್ನಲ್ಲೇ ಬೆನ್ನಿಗೆ ಚೂರಿ ಹಾಕುವವರು ಇದ್ದಾರೆ. ಈ ಹೋರಾಟ ಸಿದ್ದರಾಮಯ್ಯ ಲೂಟಿ ಮಾಡಿರುವ ಬಗ್ಗೆಯಾಗಿದೆ. ಅಕ್ರಮವಾಗಿ ಪಡೆದುಕೊಂಡಿರುವ ಸೈಟ್ಗಳು ವಾಪಾಸ್ ಬರಬೇಕು. ಈ ಪಾದಯಾತ್ರೆಯನ್ನ ದಾರಿ ತಪ್ಪಿಸಬೇಡಿ ಎಂದು ಡಿ.ಕೆ ಶಿವಕುಮಾರ್ಗೆ ಎಚ್ಚರಿಕೆ ನೀಡಿದ್ದಾರೆ.