ಕೊಪ್ಪಳ : ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣದ ಹಿನ್ನೆಲೆ ಬಂಧನ ಮಾಡಲಾಗಿದ್ದು, ಇದು ರಾಜಕೀಯ ಧ್ವೇಷದ ಕಾರಣ ಅಲ್ಲ, ಮುನಿರತ್ನಗೆ ಅಪರಾಧ ಮಾಡು ಅಂತ ನಾವು ಹೇಳಿದ್ವಾ ಎಂದು ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.
ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲು ಕೊಪ್ಪಳಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಮುನಿರತ್ನನಿಗೆ ಅಪರಾಧ ಮಾಡು ಅಂತ ನಾವು ಹೇಳಿದ್ವಾ, ಮುನಿರತ್ನ ಮೇಲೆ ಮೂರು ಪ್ರಕರಣ ದಾಖಲಾಗಿದೆ. ಈಗ ಹೇಳಿ ನಾವು ಕ್ರಮ ಕೈಗೊಳ್ಳೋದು ಬಿಡಬೇಕಾ ಹೇಳಿ ಎಂದರು.
ಶಾಸಕ ಮುನಿರತ್ನ ಸಾಕಷ್ಟು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಎಫ್ ಐ ಆರ್ ದಾಖಲಾಗಿದೆ. ತನಿಖೆಗೆ ಎಸ್ ಐಟಿ ರಚನೆ ಮಾಡಲಾಗಿದೆ. ಅವರಿಗೆ ನಾವು ಕಾನೂನು ಉಲ್ಲಂಘಿಸಿ ಅಂತ ಹೇಳಿಲ್ಲವಲ್ಲ? ಅಥವಾ ನಾವೇನಾದ್ರು ಅವರಿಗೆ ಅಪರಾಧ ಮಾಡು ಅಂತ ಹೇಳಿದ್ವ? ಇಲ್ಲ ತಾನೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.