ಕೆಎನ್ಎನ್ಡಿಜಿಟಲ್ ಡೆಸ್ಕ್ ; UPI ಮತ್ತು ನೆಟ್ ಬ್ಯಾಂಕಿಂಗ್ ಮಾಡುವಾಗ ಕೆಲವೊಂದು ಬಾರಿ ಮಿಸ್ ಆಗಿ ಬೇರೆಯವ್ರ ಅಕೌಂಟ್ಗೆ ದುಡ್ಡ ಹೋಗೋದು ಸಾಮಾನ್ಯ. ಆದ್ರೆ, ಇದಕ್ಕಾಗಿ ನೀವು ಚಿಂತಿಸ್ಬೇಕಿಲ್ಲ. ನಿಮ್ಮ ಸಂಪೂರ್ಣ ಹಣವನ್ನ ನೀವು ಎರಡು ದಿನಗಳಲ್ಲಿ ಮರು ಪಡೆಯಬಹುದು.
ಹೌದು, ಆರ್ಬಿಐನ ಹೊಸ ಮಾರ್ಗಸೂಚಿಗಳ ಪ್ರಕಾರ, ತಪ್ಪಾಗಿ ಆದ ವರ್ಗಾವಣೆಯಾದ ಹಣವನ್ನ 48 ಗಂಟೆಗಳ ಒಳಗೆ ಮರುಪಾವತಿ ಮಾಡಬಹುದು. ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮಾಡಿದ ನಂತ್ರ ಸ್ವೀಕರಿಸಿದ ಸಂದೇಶವನ್ನ ಡಿಲಿಟ್ ಮಾಡ್ಬೇಡಿ. ಯಾಕಂದ್ರೆ, ಈ ಸಂದೇಶವು PPBL ಸಂಖ್ಯೆಯನ್ನ ಒಳಗೊಂಡಿಡುತ್ತೆ. ಹಣ ಮರು ಪಡೆಯಲು ನಿಮಗೆ ಈ ಸಂಖ್ಯೆಯ ಅತ್ಯಗತ್ಯ.
RBI ಹೇಳುವಂತೆ 48 ಗಂಟೆಗಳ ಒಳಗೆ ನಿಮ್ಮ ಹಣವನ್ನ ಮರುಪಾವತಿ ಮಾಡುವುದು ಜವಾಬ್ದಾರಿ ನಿಮ್ಮ ಬ್ಯಾಂಕಿನದ್ದು. ಒಂದ್ವೇಳೆ ಹಣ ಮರಳಿ ಪಡೆಯಲು ಬ್ಯಾಂಕ್ಗಳು ಸಹಾಯ ಮಾಡದಿದ್ರೆ, ಗ್ರಾಹಕರು bankingombudsman.rbi.org.in ನಲ್ಲಿ ದೂರು ನೀಡಬೋದು. ಇನ್ನು ತಪ್ಪಾಗಿ ಹಣ ತಪ್ಪು ಖಾತೆಗೆ ಹೋದ್ರೆ, ಇದಕ್ಕಾಗಿ ಪತ್ರ ಬರೆದು ಬ್ಯಾಂಕ್ಗೆ ನೀಡಬೇಕಾಗುತ್ತೆ.
ಹಣ ವಾಪಸ್ ಪಡೆಯಲು ಈ ಹಂತ ಅನುಸರಿಸಿ.!
* ತಪ್ಪಾಗಿ ತಪ್ಪು ಖಾತೆಗೆ ಹಣ ವರ್ಗಾಯಿಸಿದ್ರೆ, ಮೊದಲು ನಿಮ್ಮ ಬ್ಯಾಂಕ್ಗೆ ಕರೆ ಮಾಡಿ ಮತ್ತು ಎಲ್ಲಾ ಮಾಹಿತಿಯೊಂದಿಗೆ PPBL ಸಂಖ್ಯೆ ನಮೂದಿಸಿ.
* ನಂತ್ರ ಬ್ಯಾಂಕ್ಗೆ ಹೋಗಿ ಅಲ್ಲಿ ನಿಮ್ಮ ದೂರು ದಾಖಲಿಸಿ
* ಶಾಖಾ ವ್ಯವಸ್ಥಾಪಕರಿಗೆ ಪತ್ರ ಬರೆಯಿರಿ
* ಈ ಪತ್ರದಲ್ಲಿ ಹಣ ಹೋಗಿರುವ ಖಾತೆ ಸಂಖ್ಯೆ ಬರೆಯಿರಿ. ಇದರ ಜೊತೆಗೆ ನೀವು ಯಾರಿಗೆ ಹಣ ಕಳುಹಿಸಲು ಬಯಸುತ್ತೀರಿ ಅವ್ರ ಖಾತೆಯ ಸಂಖ್ಯೆಯನ್ನ ಸಹ ಬರೆಯಿರಿ
* ವಹಿವಾಟಿನ ಉಲ್ಲೇಖ ಸಂಖ್ಯೆ, ವಹಿವಾಟಿನ ದಿನಾಂಕ, ಮೊತ್ತ ಮತ್ತು IFSC ಕೋಡ್ ನಮೂದಿಸಿ.