ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದವರು ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ಬಿಜೆಪಿಯವರು ಅಧಿಕಾರದ ಲ್ಲಿದ್ದಾಗ 2022ರಲ್ಲಿ ಕುಕ್ಕರ್ಬಾಂಬ್ ಸ್ಪೋಟಿಸಿತ್ತು. ಆಗ ರಾಜೀನಾಮೆ ಕೊಟ್ಟಿದ್ದರಾ? ಎಂದು ಕಿಡಿ ಕಾರಿದರು.
ರಾಜ್ಯ ಸಾರಿಗೆಗೆ ಐದು ರಾಷ್ಟ್ರೀಯ ಸಾರ್ವಜನಿಕ ‘ಸಾರಿಗೆ ಪ್ರಶಸ್ತಿಗಳ ಗರಿ’ | National public transport awards
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಬಹಳ ಗಂಭೀರ, ಆಳ ಹಾಗೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು,ಸಾಕಷ್ಟು ಕುರುಹುಳು, ಸಿಸಿಟಿವಿಯಲ್ಲಿ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡುವು ದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ‘ಅಡ್ಡಮತದಾನ’ : ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಗೆ ಬಿಜೆಪಿ ‘ನೋಟಿಸ್’
ಇದು ರಾಜ್ಯದ,ಬೆಂಗಳೂರಿನ ಸುರಕ್ಷತೆಯ ಪ್ರತಿಷ್ಠೆ. ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ. ದೊಡ್ಡ ತಂಡದಿಂದ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಟೈಮರ್ ಎಷ್ಟು ಕೆಪಾಸಿಟಿ ಇತ್ತು ಎಂಬುದೂ ಸೇರಿ ಎಲ್ಲದರ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಕೆಫೆಯಲ್ಲಿ ಸ್ಫೋಟಕ ಇಟ್ಟು ಹೋದವನು ಬಸ್ನಲ್ಲಿ ಬಂದಿರುವ ಸಾಧ್ಯತೆ ಇದೆ. ಹಾಗಾಗಿ ಈ ಮಾರ್ಗದಲ್ಲಿ ಸಂಚರಿಸಿರುವ ಸುಮಾರು 28 ಬಸ್ಗಳ ಸಿಸಿಟಿವಿ ಕ್ಯಾಮೆರಾ
ಪರಿಶೀಲಿಸಲಾಗುತ್ತಿದೆ ಎಂದರು.
BREAKING : ಕಾಂಗ್ರೆಸ್ ಗೆ ‘ಬಿಗ್ ಶಾಕ್’ : ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ‘ಕೈ’ ಬಿಟ್ಟು ಬಿಜೆಪಿ ಸೇರ್ಪಡೆ
ಘಟನಾ ಸ್ಥಳಕ್ಕೆ ಹೋದಾಗ ಕೆಲವರು ಹೋಟೆಲ್ನವರು ಮೂರ್ನಾಲ್ಕು ಕಡೆ ಶಾಖೆಗಳನ್ನು ತೆರೆದು ಯಶಸ್ವಿಯಾಗಿ ದ್ದಾರೆ. ಅದಕ್ಕೆ ಹೊಟ್ಟೆ ಉರಿಯಿಂದಲೂ ಈ ರೀತಿ ಮಾಡಿರಬಹುದು ಅಂತ ಹೇಳಿದರು. ಹಾಗಾಗಿ ದ್ವೇಷದಿಂದ ಅಥವಾ ವೈಯಕ್ತಿಕ ಕಾರಣಕ್ಕೆ ಈ ಘಟನೆ ಆಗಿರಬಹುದಾ ಅಂತ ಲೂ ತನಿಖೆ ನಡೆಯುತ್ತಿದೆ ಎಂದರು.ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಆರೋಪಕ್ಕೂ ಈ ಘಟನೆಗೂ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆಗೆ, ಹಾಗೆಲ್ಲಾ ಊಹೆ ಮಾಡಿ ಹೇಳೋದಿಲ್ಲ ಎಂದರು.