Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Rent Agreement: ಬಾಡಿಗೆ ಒಪ್ಪಂದ ಕೇವಲ 11 ತಿಂಗಳಿಗೆ ಮಾತ್ರ ಏಕೆ? 12 ತಿಂಗಳು ಏಕಿಲ್ಲ? ಇಲ್ಲಿದೆ ಅಸಲಿ ರಹಸ್ಯ.!

​ಏಕಪಕ್ಷೀಯ ಆಳ್ವಿಕೆಯಿಂದ 24/7 ಡಿಜಿಟಲ್ ಯುಗದವರೆಗೆ: ಜವಾಹರಲಾಲ್ ನೆಹರೂ ದಾಖಲೆ ಮುರಿದ ಪ್ರಧಾನಿ ಮೋದಿ!

ಚೆಕ್ ಬೌನ್ಸ್ ಆದರೆ ಜೈಲು ಗ್ಯಾರಂಟಿಯೇ? ಕಾನೂನು ಏನು ಹೇಳುತ್ತದೆ? ಇಂದೇ ತಿಳಿದುಕೊಳ್ಳಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಧಾನಿ ಮೋದಿಗೆ ನ್ಯಾಯಾಂಗದ ಮೇಲಿನ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ?: ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ
KARNATAKA

ಪ್ರಧಾನಿ ಮೋದಿಗೆ ನ್ಯಾಯಾಂಗದ ಮೇಲಿನ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ?: ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ವಿದೇಶಿ ನಾಯಕರ ಜನ್ಮದಿನಕ್ಕೆ ಮತ್ತು ಇತರೇ ವಿಚಾರಗಳಿಗೆ ಕ್ಷಣಮಾತ್ರದಲ್ಲಿ ಟ್ವೀಟ್ ಮಾಡುವ ಪ್ರಧಾನಿಯವರಿಗೆ, ನ್ಯಾಯಾಂಗದ ಮೇಲಿನ ಈ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ? ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸಂವಿಧಾನದ ಹೃದಯದಂತಿರುವ ನ್ಯಾಯಾಂಗದ ಮುಖ್ಯಸ್ಥರ ಮೇಲೆ ಹಲ್ಲೆಯಾದಾಗ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಕ್ರೋಶದ ಕಟ್ಟೆಯೊಡೆಯಲು ತೆಗೆದುಕೊಂಡ ಸಮಯ ಬರೋಬ್ಬರಿ 9 ಗಂಟೆಗಳು! ವಿದೇಶಿ ನಾಯಕರ ಜನ್ಮದಿನಕ್ಕೆ ಮತ್ತು ಇತರೇ ವಿಚಾರಗಳಿಗೆ ಕ್ಷಣಮಾತ್ರದಲ್ಲಿ ಟ್ವೀಟ್ ಮಾಡುವ ಪ್ರಧಾನಿಯವರಿಗೆ, ನ್ಯಾಯಾಂಗದ ಮೇಲಿನ ಈ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ? ಎಂದು ಕೇಳಿದ್ದಾರೆ.

“ಪ್ರತಿಯೊಬ್ಬ ಭಾರತೀಯನೂ ಕೆರಳಿದ್ದಾನೆ” ಎಂಬುದು ಪ್ರಧಾನಿಯವರ ಮಾತು. ಆದರೆ, ಆ ‘ಪ್ರತಿಯೊಬ್ಬರಲ್ಲಿ’ ದೇಶದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹಸಚಿವರು, ದೇಶದ ಆಡಳಿತ ನಡೆಸುವ ಕೇಂದ್ರ ಸಚಿವರು, ಮತ್ತು ಅವರದ್ದೇ ಆದ ಬಿಜೆಪಿ ಪಕ್ಷದ ಕೋಟ್ಯಂತರ ಕಾರ್ಯಕರ್ತರು ಸೇರಿಲ್ಲವೇ? ಅವರೆಲ್ಲರ ಮೌನ, ಯಾರಿಗೆ ನೀಡುತ್ತಿರುವ ಸಮ್ಮತಿ? ಎಂದು ಗುಡುಗಿದ್ದಾರೆ.

ಒಂದೆಡೆ ಪ್ರಧಾನಿಗಳು ತಡವಾಗಿ ಕೆರಳಿದರೆ, ಇನ್ನೊಂದೆಡೆ ಅವರದ್ದೇ ವಿಚಾರಧಾರೆಯ ಬೆಂಬಲಿಗರು ಈ ಹೇಯ ಕೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮಾಚರಣೆಯ ಬಗ್ಗೆ ಪ್ರಧಾನಿಯವರು ಪ್ರತಿನಿಧಿಸುವ ಪಕ್ಷದ ನಾಯಕರು ತುಟಿ ಬಿಚ್ಚದಿರುವುದು, ಈ ಕೃತ್ಯಕ್ಕೆ ನೀಡುತ್ತಿರುವ ಪರೋಕ್ಷ ಪ್ರೋತ್ಸಾಹವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದು ಕೇವಲ ವ್ಯಕ್ತಿಯೊಬ್ಬರ ಮೇಲಿನ ದಾಳಿಯಲ್ಲ; ಇದು ಪ್ರಜಾಪ್ರಭುತ್ವದ ಅಡಿಪಾಯವಾದ ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ವ್ಯವಸ್ಥಿತ ದಾಳಿ. ‘ಮತ ಕಳ್ಳತನ’ದಂತಹ ಆರೋಪಗಳಿಗೆ ಬೀದಿಗಿಳಿದು ಹೋರಾಡುವವರು, ಸಂವಿಧಾನದ ಘನತೆಯನ್ನೇ ಪ್ರಶ್ನಿಸುವಾಗ ‘ಕುಂಭಕರ್ಣ ನಿದ್ರೆ’ಗೆ ಜಾರಿರುವುದರ ಹಿಂದಿನ ಮರ್ಮವೇನು? ನ್ಯಾಯಾಲಯದ ಪಾವಿತ್ರ್ಯತೆಗಿಂತ ರಾಜಕೀಯ ಲಾಭವೇ ಬಿಜೆಪಿಗೆ ಮುಖ್ಯವಾಯಿತೇ? ಎಂದು ಕಿಡಿಕಾರಿದ್ದಾರೆ.

ಪ್ರಧಾನಿಯವರೇ, ನಿಮ್ಮ ನಿಜವಾದ ಆಕ್ರೋಶ ಇರಬೇಕಾಗಿದ್ದು ಈ ದಾಳಿಯ ಮೇಲಲ್ಲ; ಬದಲಾಗಿ, ಇಂತಹ ದಾಳಿಗಳನ್ನು ಮಾಡಲು ಪ್ರೇರೇಪಿಸುವ, ಸಂಭ್ರಮಿಸುವ ಮತ್ತು ಪೋಷಿಸುವ ನಿಮ್ಮದೇ ವಿಚಾರಧಾರೆಯ ವಿರುದ್ಧ. ಇಲ್ಲವಾದರೆ, ನಿಮ್ಮ 9 ಗಂಟೆಗಳ ತಡವಾದ ಖಂಡನೆ, ಕೇವಲ ರಾಜಕೀಯ ನಾಟಕವಾಗಿ ಉಳಿಯುತ್ತದೆ ಎಂದು ತಿಳಿಸಿದ್ದಾರೆ.

ಸಂವಿಧಾನದ ಹೃದಯದಂತಿರುವ ನ್ಯಾಯಾಂಗದ ಮುಖ್ಯಸ್ಥರ ಮೇಲೆ ಹಲ್ಲೆಯಾದಾಗ, ದೇಶದ ಪ್ರಧಾನಿ ಶ್ರೀ @narendramodi ಅವರ ಆಕ್ರೋಶದ ಕಟ್ಟೆಯೊಡೆಯಲು ತೆಗೆದುಕೊಂಡ ಸಮಯ ಬರೋಬ್ಬರಿ 9 ಗಂಟೆಗಳು!

ವಿದೇಶಿ ನಾಯಕರ ಜನ್ಮದಿನಕ್ಕೆ ಮತ್ತು ಇತರೇ ವಿಚಾರಗಳಿಗೆ ಕ್ಷಣಮಾತ್ರದಲ್ಲಿ ಟ್ವೀಟ್ ಮಾಡುವ ಪ್ರಧಾನಿಯವರಿಗೆ, ನ್ಯಾಯಾಂಗದ ಮೇಲಿನ ಈ ಪ್ರಹಾರವನ್ನು ಖಂಡಿಸಲು… pic.twitter.com/gOhLO1hraU

— Ramalinga Reddy (@RLR_BTM) October 7, 2025

‘ಸ್ಥಳೀಯರಿಗೆ ಉದ್ಯೋಗ’ ನೀಡುವ ನಿಟ್ಟಿನಲ್ಲಿ ಸಾಗರದಲ್ಲಿ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಓಪನ್: RBD ಮಹೇಶ್

ಜಿಯೋಭಾರತ್ ಫೋನ್ ಗಳಲ್ಲಿ ಇನ್ನು ಸ್ಮಾರ್ಟ್ ಕನೆಕ್ಟಿವಿಟಿ ಹಾಗೂ ಡಿಜಿಟಲ್ ಕೇರ್; ಬೆಲೆ ₹799ರಿಂದ ಆರಂಭ

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲು ಸೇವೆಯ ಮಾರ್ಗ ಬದಲಾವಣೆ

Share. Facebook Twitter LinkedIn WhatsApp Email

Related Posts

Rent Agreement: ಬಾಡಿಗೆ ಒಪ್ಪಂದ ಕೇವಲ 11 ತಿಂಗಳಿಗೆ ಮಾತ್ರ ಏಕೆ? 12 ತಿಂಗಳು ಏಕಿಲ್ಲ? ಇಲ್ಲಿದೆ ಅಸಲಿ ರಹಸ್ಯ.!

2 Mins Read

ಚೆಕ್ ಬೌನ್ಸ್ ಆದರೆ ಜೈಲು ಗ್ಯಾರಂಟಿಯೇ? ಕಾನೂನು ಏನು ಹೇಳುತ್ತದೆ? ಇಂದೇ ತಿಳಿದುಕೊಳ್ಳಿ!

2 Mins Read

Rain Alert : ರಾಜ್ಯಾದ್ಯಂತ ಮುಂದಿನ 3 ದಿನ `ನೈಋತ್ಯ ಮುಂಗಾರು’ ಆರ್ಭಟ: ಈ ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ

1 Min Read
Recent News

Rent Agreement: ಬಾಡಿಗೆ ಒಪ್ಪಂದ ಕೇವಲ 11 ತಿಂಗಳಿಗೆ ಮಾತ್ರ ಏಕೆ? 12 ತಿಂಗಳು ಏಕಿಲ್ಲ? ಇಲ್ಲಿದೆ ಅಸಲಿ ರಹಸ್ಯ.!

​ಏಕಪಕ್ಷೀಯ ಆಳ್ವಿಕೆಯಿಂದ 24/7 ಡಿಜಿಟಲ್ ಯುಗದವರೆಗೆ: ಜವಾಹರಲಾಲ್ ನೆಹರೂ ದಾಖಲೆ ಮುರಿದ ಪ್ರಧಾನಿ ಮೋದಿ!

ಚೆಕ್ ಬೌನ್ಸ್ ಆದರೆ ಜೈಲು ಗ್ಯಾರಂಟಿಯೇ? ಕಾನೂನು ಏನು ಹೇಳುತ್ತದೆ? ಇಂದೇ ತಿಳಿದುಕೊಳ್ಳಿ!

​2025ರಲ್ಲಿ ಜಾಗತಿಕ ಮಟ್ಟದಲ್ಲಿ ದಾಖಲೆಯ ಸಶಸ್ತ್ರ ಸಂಘರ್ಷಗಳು: ಎರಡನೇ ವಿಶ್ವಯುದ್ಧದ ನಂತರದ ಗರಿಷ್ಠ ಮಟ್ಟಕ್ಕೆ ಏರಿಕೆ!

State News
KARNATAKA

Rent Agreement: ಬಾಡಿಗೆ ಒಪ್ಪಂದ ಕೇವಲ 11 ತಿಂಗಳಿಗೆ ಮಾತ್ರ ಏಕೆ? 12 ತಿಂಗಳು ಏಕಿಲ್ಲ? ಇಲ್ಲಿದೆ ಅಸಲಿ ರಹಸ್ಯ.!

By kannadanewsnow57 KARNATAKA 2 Mins Read

ನೀವೇನಾದರೂ ಬಾಡಿಗೆ ಮನೆಯಲ್ಲಿದ್ದರೆ ಅಥವಾ ಈ ಹಿಂದೆ ಇದ್ದಿದ್ದರೆ, ಮನೆ ಮಾಲೀಕರು ಯಾವಾಗಲೂ ಕೇವಲ 11 ತಿಂಗಳ ಅವಧಿಗೆ ಮಾತ್ರ…

ಚೆಕ್ ಬೌನ್ಸ್ ಆದರೆ ಜೈಲು ಗ್ಯಾರಂಟಿಯೇ? ಕಾನೂನು ಏನು ಹೇಳುತ್ತದೆ? ಇಂದೇ ತಿಳಿದುಕೊಳ್ಳಿ!

Rain Alert : ರಾಜ್ಯಾದ್ಯಂತ ಮುಂದಿನ 3 ದಿನ `ನೈಋತ್ಯ ಮುಂಗಾರು’ ಆರ್ಭಟ: ಈ ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.