ನವದೆಹಲಿ : ರಾಹುಲ್ ಗಾಂಧಿಗೆ ‘ಭಾರತ್ ಜೋಡೋ ಯಾತ್ರೆ’ ಮುಂದೂಡುವ ಸರ್ಕಾರದ ಸಲಹೆಯ ಬಗ್ಗೆ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಾರತ್ ಜೋಡೋ ಯಾತ್ರೆಯಿಂದ ಮೋದಿ ಸರ್ಕಾರ ನಲುಗಿದೆ. ಜನ ಸಾಮಾನ್ಯರ ಗಮನ ಬೇರೆಡೆ ಸೆಳೆಯಲು ಬಿಜೆಪಿ ನಾನಾ ಪ್ರಶ್ನೆಗಳನ್ನ ಎತ್ತುತ್ತಿದೆ. ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ಎಲ್ಲಾ ಪ್ರೋಟೋಕಾಲ್ಗಳನ್ನ ಅನುಸರಿಸಿ, ಮಾಸ್ಕ್ ಧರಿಸಿ ಮನೆ ಮನೆಗೆ ಹೋಗಿದ್ದಾರೆಯೇ.? ಎಂದು ಚೌಧರಿ ಕೇಳಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯಿಂದ ಆರಂಭವಾದ ಈ ಹೊಸ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಷ್ಟಪಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದ್ರೆ, ಸಾಮಾನ್ಯ ಜನರು ಇದನ್ನ ತುಂಬಾ ಇಷ್ಟಪಡುತ್ತಿದ್ದಾರೆ ಮಾತ್ರವಲ್ಲದೇ ಅದರಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಮಾಂಡವೀಯರನ್ನ ನೇಮಿಸಲಾಗಿದೆ ಎಂದರು.
ಅಂದ್ಹಾಗೆ, ಕೇಂದ್ರ ಆರೋಗ್ಯ ಸಚಿವರು, ರಾಹುಲ್ ಗಾಂಧಿ ಅವ್ರಿಗೆ ಪತ್ರ ಬರೆದಿದ್ದು, ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕು ಮತ್ತು ಮಾಸ್ಕ್-ಸ್ಯಾನಿಟೈಜರ್ ಬಳಸಬೇಕು ಎಂದಿದ್ದಾರೆ. ಇದಲ್ಲದೆ, ಕೋವಿಡ್ಗೆ ಲಸಿಕೆ ಹಾಕಿದ ಜನರನ್ನ ಮಾತ್ರ ಈ ಪ್ರಯಾಣದಲ್ಲಿ ಸೇರಿಸಿಕೊಳ್ಳಬೇಕು. ಕೋವಿಡ್ ಪ್ರೋಟೋಕಾಲ್ ಅನುಸರಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಹಿತದೃಷ್ಟಿಯಿಂದ ಭಾರತ್ ಜೋಡೋ ಯಾತ್ರೆಯನ್ನ ಮುಂದೂಡಬೇಕು ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.
BREAING NEWS : ವಿಧಾನ ಪರಿಷತ್ ಸಭಾಪತಿಯಾಗಿ `ಬಸವರಾಜ ಹೊರಟ್ಟಿ’ ಅವಿರೋಧ ಆಯ್ಕೆ : ಅಧಿಕೃತ ಘೋಷಣೆಯೊಂದೇ ಬಾಕಿ
BREAKING NEWS: ವಿಧಾನಸಭೆ ಕಲಾಪ ಕೆಲಕಾಲ ಮುಂದೂಡಿಕೆ | Assembly adjourned