ಬೆಂಗಳೂರು: ಸಾವಿರಾರು ಕೋಟಿ ರೂ.ಗಳ ಬೃಹತ್ ಅಕ್ರಮ ಗಣಿಗಾರಿಕೆ ಕೇಸ್ ಮರೆಮಾಚಲು ಬೇಕಂತಲ್ಲೇ ಶಾಸಕ ಜರ್ನಾದನ್ ರೆಡ್ಡಿ, ಬ್ಯಾನರ್ ಗಲಾಟೆ ಶುರು ಮಾಡಿಸಿದ್ದರೆ ಎಂಬ ಗುಮಾನಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಬಳ್ಳಾರಿಯ ಜನರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.
ಸುಪ್ರೀಂಕೋರ್ಟ್ ಮುಂದೆ ಬರುವ ಓಬಳಾಪುರಂ ಮೈನಿಂಗ್ ಕೇಸ್‌ನ ವಿಚಾರಣೆ ಮರೆಮಾಚಲು, ಕೇಸ್ ಕುರಿತು ವಿಷಯಾಂತರಕ್ಕೆ ಅನಗತ್ಯವಾಗಿ ಬ್ಯಾನರ್ ಗಲಾಟೆಯನ್ನೇ ದೊಡ್ಡದಾಗಿ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಓಬಳಾಪುರಂ ಮೈನಿಂಗ್ ಕೇಸ್‌ನಲ್ಲಿ ಸಿಬಿಐ ಕೋರ್ಟ್ 2025ರ ಮೇ.6 ರಂದು ಜರ್ನಾದನ್‌ರೆಡ್ಡಿಗೆ 7 ವರ್ಷ ಶಿಕ್ಷೆ ಪ್ರಕಟಿಸಿತ್ತು. ಆದರೆ, ತೆಲಂಗಾಣ ಹೈಕೋರ್ಟ್ ಶಿಕ್ಷೆ ರದ್ದುಗೊಳಿಸಿ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಬಗ್ಗೆ ಸಿಬಿಐ , ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಅಲ್ಲದೆ, ಸುಪ್ರೀಂಕೋರ್ಟ್‌ನಲ್ಲಿ ಜನಾರ್ದನ ರೆಡ್ಡಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ. ಇದು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಇದನ್ನು ಮರೆಮಾಚಲು ಬಳ್ಳಾರಿಯ ಬ್ಯಾನರ್ ಗಲಾಟೆಯನ್ನು ರೆಡ್ಡಿಯವರು ದೊಡ್ಡದಾಗಿ ಬಿಂಬಿಸಿರುವ ಬಗ್ಗೆ ಅನುಮಾನ ಶುರುವಾಗುತ್ತಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಗಂಗಾವತಿ ಶಾಸಕರಾಗಿರುವ ಜನಾರ್ದನ ರೆಡ್ಡಿಗೆ, ಏಳು ವರ್ಷಗಳ ಜೈಲು ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್ ರದ್ದುಗೊಳಿಸಿತ್ತು. ಜೊತೆಗೆ, ಈ ಪ್ರಕರಣದಲ್ಲಿ, ರೆಡ್ಡಿಗೆ ಜಾಮೀನು ಸಹ ನೀಡಿತ್ತು. ಸಿಬಿಐ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಅವರು ಕಳೆದುಕೊಂಡಿರುವ ಶಾಸಕತ್ವ ಸಹ ಅವರಿಗೆ ಮತ್ತೆ ಸಿಕ್ಕಿತ್ತು. ಆ ತೀರ್ಪಿನ ವಿರುದ್ಧ ಜನಾರ್ದನ ರೆಡ್ಡಿಯವರು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ತೆಲಂಗಾಣ ಹೈಕೋರ್ಟ್, ಕಳೆದ ಜೂ. 11ರಂದು ಈ ತೀರ್ಪು ನೀಡಿ ಷರತ್ತು ಬದ್ಧ ಜಾಮೀನು ನೀಡುವಾಗ ತೆಲಂಗಾಣ ಹೈಕೋರ್ಟ್ ಜನಾರ್ದನ ರೆಡ್ಡಿಯವರಿಗೆ 3 ಷರತ್ತು ವಿಧಿಸಿತ್ತು.
ಯಾವ ಪ್ರಕರಣದಲ್ಲಿ ರೆಡ್ಡಿಗೆ ಶಿಕ್ಷೆ?
ಆಂಧ್ರಪ್ರದೇಶಕ್ಕೆ ಸೇರಿದ, ಕರ್ನಾಟಕದ ಗಡಿ ಭಾಗದಲ್ಲಿರುವ ಓಬಳಾಪುರಂ ಎಂಬ ಗ್ರಾಮದಲ್ಲಿ 1990ರ ದಶಕದಿಂದಲೂ ಜನಾರ್ದನ ರೆಡ್ಡಿಯವರು ಓಬಳಾಪುರಂ ಮೈನಿಂಗ್ ಕಂಪನಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಗಣಿಗಾರಿಕೆ ನಡೆಸುತ್ತಾ ಬಂದಿದ್ದರು. ಆ ಕಂಪನಿಯಿಂದ ಗಣಿಗಾರಿಕೆಯ ನಿಯಮ ಉಲ್ಲಂಘನೆ, ಅದಿರಿಗಾಗಿ ಕರ್ನಾಟಕ – ಆಂಧ್ರ ನಡುವಿನ ಗಡಿಯ ರೇಖೆಯನ್ನೇ ಬದಲಾಯಿಸಿ, ಬದಲಾದ ನಕ್ಷೆಗಳಿಗೆ ಅನುಸಾರವಾಗಿ ಸರ್ಕಾರದಿಂದ ಗುತ್ತಿಗೆ ಅನುಮತಿಗಳು ಪಡೆದಿರುವುದು ಸೇರಿದಂತೆ ಅನೇಕ ರೀತಿಯ ಅವ್ಯವಹಾರಗಳಾಗಿರುವ ಬಗ್ಗೆ ಅವರ ವಿರುದ್ಧ ದೂರುಗಳು ದಾಖಲಾಗಿದ್ದವು.
ಅದೇ ಪ್ರಕರಣವು ನ್ಯಾಯಾಲಯದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿತ್ತು. ಕಳೆದ ಮೇ 6ರಂದು ರೆಡ್ಡಿಯವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಏಳು ವರ್ಷಗಳ ಶಿಕ್ಷೆ ವಿಧಿಸಿತ್ತು. ಈಗ ಆ ಶಿಕ್ಷೆ ರದ್ದಾಗಿದೆ. ಸಿಬಿಐ ನ್ಯಾಯಾಲಯದಿಂದ ಜನಾರ್ದನ ರೆಡ್ಡಿಯವರ ವಿರುದ್ಧ ತೀರ್ಪು ಹೊರಬಿದ್ದ ನಂತರ, ಅವರನ್ನು ಕರ್ನಾಟಕ ವಿಧಾನಸಭೆಯ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ತೆಲಂಗಾಣ ಹೈಕೋರ್ಟ್ ನಿಂದ ಜೂ. 11ರಂದು ಹೊರಬಿದ್ದಿರುವ ತೀರ್ಪಿನಿಂದಾಗಿ, ಜನಾರ್ದನ ರೆಡ್ಡಿಯವರ ಶಾಸಕತ್ವ ಸ್ಥಾನ ಅವರಿಗೆ ಮರಳಿದೆ. ಸಿಬಿಐ ನ್ಯಾಯಾಲಯದ ತೀರ್ಪು ಮೇ 6ರಂದು ಹೊರಬಿದ್ದಿದ್ದರಿಂದ ಅದೇ ದಿನದಿಂದ ಜಾರಿಗೆ ಬರುವಂತೆ ಶಾಸಕತ್ವ ಅನರ್ಹತೆಯನ್ನೂ ಜಾರಿಗೊಳಿಸಿ ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ಆದೇಶ ಹೊರಡಿಲಾಗಿತು.
ಇತರೆ ಮುಖ್ಯಾಂಶಗಳು
* ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಸಿಬಿಐ
* ಮುಂದಿನ ವಾರ ಬಹುತೇಕ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಸುಪ್ರೀಂಕೋರ್ಟ್
* ಸಿಬಿಐ ಕೋರ್ಟ್‌ನ ತೀರ್ಪು ಎತ್ತಿಹಿಡಿದರೆ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ
* ಇದೇ ಕಾರಣಕ್ಕೆ ಕ್ಷುಲ್ಲಕ ಬ್ಯಾನರ್ ಗಲಾಟೆಯನ್ನ ದೊಡ್ಡದು ಮಾಡಿರುವ ಬಗ್ಗೆ ಸ್ಥಳೀಯರಲ್ಲಿ ಅನುಮಾನ
* ಮುಂದಿನ ವಾರ ಸುಪ್ರೀಂಕೋರ್ಟ್‌ನಲ್ಲಿ ಜನಾರ್ದನ ರೆಡ್ಡಿ ಭವಿಷ್ಯ ನಿರ್ಧಾರ.
* 29 ಲಕ್ಷ ಮೆಟ್ರಿಕ್ ಟನ್ ಅಕ್ರಮ
* 884 ಕೋಟಿ ರೂ. ಮೊತ್ತದ ಅದಿರು ತೆಗೆದ ಆರೋಪ
* ಕರ್ನಾಟಕ,ಆಂಧ್ರ ಗಡಿರೇಖೆ ಅಳಿಸಿ ಹಾಕಿದ ಆರೋಪ
* 2025ರ ಮೇ 6ರಂದು ಸಿಬಿಐ ಕೋರ್ಟ್ ನಿಂದ ಶಿಕ್ಷೆ ಪ್ರಕಟ
* 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಜನಾರ್ಧನ ರೆಡ್ಡಿ
* ಈಗಾಗಲೇ 3 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ರೆಡ್ಡಿ
* ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಮನವಿ
ಜಗನ್ ಸರ್ಕಾರದ ವೇಳೆ ವಿಥ್ ಡ್ರಾ ಮಾಡಲಾಗಿತ್ತು
* ಕಾನೂನುಬಾಹಿರವಾಗಿ ಓಬಳಾಪುರಂ ಮೈನಿಂಗ್ ಮಾಡಿರುವ ಕುರಿತು ವರದಿ ಸಲ್ಲಿಕೆ
* ನಿವೃತ್ತ ನ್ಯಾಯಮೂರ್ತಿ ಸುದಾಸ್ ದುನಿಯಾ ಅವರಿಂದ ವರದಿ ಸಲ್ಲಿಕೆ
* 115 ಪುಟ ವರದಿ ನೀಡಿರುವ ಕಮಿಟಿ.
* ವರದಿಯಲ್ಲಿ ಅಕ್ರಮ ಸಾಬೀತು
ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೆ ಅವಕಾಶ.!
BREAKING : 15 ನಿಮಿಷಗಳ ಕಾಲ `ಲಿಫ್ಟ್’ನಲ್ಲಿ ಸಿಲುಕಿದ ಕೆ.ಹೆಚ್.ಮುನಿಯಪ್ಪ, MLC ಚಂದ್ರಪ್ಪ.!








