ಬೆಂಗಳೂರು : ಇಂದು ನಟ ದರ್ಶನ್ ಗೆ ಬಿಗ್ ಡೇ ಏಕೆಂದರೆ ಕೋರ್ಟ್ ದೋಷಾರೋಪ ಪಟ್ಟಿ ಪ್ರಕ್ರಿಯೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳು ಸಾಕ್ಷಿಗಳನ್ನು ಒಪ್ಪದಿದ್ದರೆ ಕೋರ್ಟು ವಿಚಾರಣೆ ಮುಂದುವರಿಸುತ್ತದೆ. ಅಕಸ್ಮಾತ್ ಆರೋಪಿಗಳು ಆರೋಪಗಳನ್ನು ಒಪ್ಪಿಕೊಂಡರೆ ಶಿಕ್ಷ ವಿಧಿಸುತ್ತದೆ ಹಾಗಾಗಿ ದರ್ಶನ್ ಮತ್ತು ಗ್ಯಾಂಗ್ ಗೆ ಇವತ್ತು ಬಹಳ ಮಹತ್ವದ ದಿನವಾಗಿದೆ.
ಇದೆಲ್ಲದರ ಮಧ್ಯ ದರ್ಶನ್ ಮತ್ತು ಪವಿತ್ರ ಗೌಡ ಮದುವೆ ಆಗಿದ್ದಾರಾ ಎನ್ನುವ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ಬಾರಿ ವೈರಲ್ ಆಗಿದೆ. ಪವಿತ್ರ ಕುತ್ತಿಗೆಯಲ್ಲಿ ಅರಿಶಿನದ ದಾರ ಇರುವ ತಾಳಿ. ಮದುವೆ ಡ್ರೆಸ್ ನಲ್ಲಿ ದರ್ಶನ್ ಮತ್ತು ಪವಿತ್ರ ಇರುವ ಫೋಟೋ ವೈರಲ್ ಆಗಿದ್ದು, ಪವಿತ್ರಾ ಬಿಳಿ ಮತ್ತು ಮರುನ್ ಬಾರ್ಡರ್ ಸೀರೆ ಧರಿಸಿದ್ದಾಳೆ.
10 ವರ್ಷಗಳ ಹಿಂದೆ ತೆಗೆದಿರುವ ಫೋಟೋಗಳು ಈಗ ವೈರಲ್ ಆಗುತ್ತಿವೆ. ಹಾಗಾದರೆ ದರ್ಶನ್ ಮಾತೃ ಪವಿತ್ರ ಮದುವೆಯಾಗಿದ್ರ? ಅವರಿಬ್ಬರೂ ಸತಿ ಪತಿಗಳ? ದರ್ಶನಗೆ ಪವಿತ್ರ ಊಟ ಮಾಡಿಸುತ್ತಿರುವ ಫೋಟೋ ಕೂಡ ವೈರಲ್ ಆಗಿದೆ. ಹಾಗಾಗಿ ಈ ಒಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು ದರ್ಶನ್ ಮತ್ತು ಪವಿತ್ರ ಮದುವೆಯಾಗಿದ್ದರು ಎನ್ನುವ ಅನುಮಾನ ಹುಟ್ಟಿಕೊಂಡಿದೆ.
 
		



 




