ಧಾರವಾಡ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಧಾರವಾಡದಲ್ಲಿ ಮತದಾರರನ್ನು ಕ್ಯೂ ನಿಲ್ಲಿಸಿ ಚುನಾವಣಾ ಸಿಬ್ಬಂದಿಗಳು ಊಟಕ್ಕೆ ತೆರಳಿರುವ ಘಟನೆ ನಡೆದಿದೆ.ಇದರಿಂದ ಸರತಿ ಸಾರಿನಲ್ಲಿ ನಿಂತಿದ್ದ ಮತದಾರರು ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹೌದು ಈ ಒಂದು ಉಘಡನೆ ಧಾರವಾಡ ನಗರದ ಕುಮಾರಸ್ವಾಮಿ ಮೂಕಾಂಬಿಕೆ ನಗರದ ಮತಗಟ್ಟೆ ಸಂಖ್ಯೆ 180 ರಲ್ಲಿ ಈ ಒಂದು ಘಟನೆ ನಡೆದಿದ್ದು ಚುನಾವಣಾ ಸಿಬ್ಬಂದಿಗಳು ಮತದಾರರನ್ನು ಹೊರಗಡೆ ಕಿವಿನಲ್ಲಿ ನಿಲ್ಲಿಸಿ ಒಳಗಡೆ ಊಟ ಮಾಡುತ್ತಿರುವ ಘಟನೆ ನಡೆದಿದೆ.
ಧಾರವಾಡದ ಕುಮಾರಸ್ವಾಮಿ ಅವರ ಮೂಕಾಂಬಿಕೆ ನಗರದಲ್ಲಿ ಕೃಷಿ ಇಲಾಖೆ ನಿರ್ದೇಶಕರ ಕಚೇರಿಯ ಮತಗಟ್ಟೆಯಲ್ಲಿ ಮತದಾರರನ್ನು ಕ್ಯು ನಿಲ್ಲಿಸಿ ಸಿಬ್ಬಂದಿಗಳು ಊಟಕ್ಕೆ ತೆರಳಿದ್ದಾರೆ. ಮತಗಟ್ಟೆ 180 ರಲ್ಲಿ ಬಾಗಿಲು ಹಾಕಿ ಸಿಬ್ಬಂದಿ ಊಟಕ್ಕೆ ತೆರಳಿರುವ ಘಟನೆ ನಡೆದಿದೆ. ಇದರಿಂದ ಕ್ಯೂನಲ್ಲಿ ನಿಂತಿದ್ದ ಮತದಾರರು ಚುನಾವಣಾ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು.