ಧಾರವಾಡ : ಜಿಲ್ಲೆಯಲ್ಲಿ ಗಾಂಧೀ ಜಯಂತಿಯ ದಿನವಾದಂತ ಇಂದೇ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವಂತ ಘಟನೆ ನಡೆದಿದೆ. ರಾಷ್ಟ್ರಧ್ವಜ ಕಟ್ಟಿದ್ದಂತ ಧ್ವಜಕಂಭದಿಂದ ಅದನ್ನು ಕೆಳಗಿಳಿಸಿ, ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ಭಾವಚಿತ್ರವಿರುವಂತ ಧ್ವಜವನ್ನು ಹಾರಿಸಿದ್ದಾರೆ.
ಧಾರವಾಡ ನಗರದ ಟಿಪ್ಪು ಸರ್ಕಲ್ ನಲ್ಲಿ ರಾಷ್ಟ್ರ ಧ್ವಜ ಹಾರುವ ಜಾಗದಲ್ಲಿ, ಅದನ್ನು ಕೆಳಗೆ ಇಳಿಸಿ, ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ಇರುವಂತ ಭಾವಚಿತ್ರವನ್ನು ಹಾರಿಸಿದ್ದಾರೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಭಜರಂಗ ದಳದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೇ, ಟಿಪ್ಪು ಧ್ವಜವನ್ನು ಕೆಳಗಿಳಿಸಿ, ರಾಷ್ಟ್ರಧ್ವಜವನ್ನು ಕಟ್ಟಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಧಾರವಾಡದ ಶಹರ ಠಾಣೆಯ ಪೊಲೀಸರು ಆಗಮಿಸುವ ವೇಳೆಗೆ ಧ್ವಜವನ್ನು ಬದಲಾಯಿಸಲಾಗಿದೆ. ಕಿಡಿಗೇಡಿಗಳು ಈ ಕೃತ್ಯ ಎಸಗಿರೋದಾಗಿ ಹೇಳಲಾಗುತ್ತಿದೆ. ಆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಭೀತಿ: ಉದ್ವಿಗ್ನತೆಯ ಮಧ್ಯೆ ಸಂಯಮ, ನಾಗರಿಕ ರಕ್ಷಣೆಗೆ ಭಾರತ ಕರೆ
ಗಮನಿಸಿ : ಆಧಾರ್ ಕಾರ್ಡ್‌ನಲ್ಲಿ `ವಿಳಾಸ’ವನ್ನು ಎಷ್ಟು ಬಾರಿ ಬದಲಾಯಿಸಬಹುದು! ಇಲ್ಲಿದೆ ಮಾಹಿತಿ