Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮನೆಗೆ ಸೌಂದರ್ಯ, ಅದೃಷ್ಟವನ್ನು ತರುವ ಸುಂದರವಾದ ಸಸ್ಯಗಳು ಇಲ್ಲಿವೆ !

23/03/2026 9:32 AM

ಅಡುಗೆ ಅನಿಲಕ್ಕೆ ಪರ್ಯಾಯವಾದ ಹೊಸ `DME ಗ್ಯಾಸ್’ ಕಂಡುಹಿಡಿದ ಪುಣೆ ವಿಜ್ಞಾನಿಗಳು!

23/03/2026 9:13 AM

ವಾಟ್ಸಾಪ್‌ನಲ್ಲಿ ಬರಲಿದೆ ‘ಮ್ಯಾಜಿಕ್’ ಫೀಚರ್: ಓದಿದ 15 ನಿಮಿಷದಲ್ಲೇ ಮಾಯವಾಗಲಿವೆ ಸಂದೇಶಗಳು!

23/03/2026 9:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಧಾರವಾಡ : ಸೂಸೈಡ್ ಗೆ ಯತ್ನಿಸಿದ್ದ ‘ಪೋಕ್ಸೋ’ ಕೇಸ್ ಆರೋಪಿ : ಲೆಕ್ಚರರ್ ಗೆ ‘ಜಡ್ಜ್’ ವೇಷ ಹಾಕಿಸಿ ಬಂಧಿಸಿದ ಪೊಲೀಸರು!
KARNATAKA

ಧಾರವಾಡ : ಸೂಸೈಡ್ ಗೆ ಯತ್ನಿಸಿದ್ದ ‘ಪೋಕ್ಸೋ’ ಕೇಸ್ ಆರೋಪಿ : ಲೆಕ್ಚರರ್ ಗೆ ‘ಜಡ್ಜ್’ ವೇಷ ಹಾಕಿಸಿ ಬಂಧಿಸಿದ ಪೊಲೀಸರು!

By kannadanewsnow0509/02/2025 7:47 PM

ಧಾರವಾಡ : ಪೋಕ್ಸೋ ಕೇಸಲ್ಲಿ ಅರೆಸ್ಟ್ ಆಗಿದ್ದಂತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕೋರ್ಟ್ ನೀಡಿತ್ತು. ಜೈಲಿಗೆ ಕರೆದೊಯ್ಯುತ್ತಿದ್ದಂತ ವೇಳೆ ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿ ಮನೆ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳೋ ಧಮ್ಕಿ ಹಾಕಿ ಹೈಡ್ರಾಮಾವನ್ನೇ ಮಾಡಿದ್ದನು.ಆದರೇ ಪೊಲೀಸರು ಮಾತ್ರ ಅಷ್ಟೇ ಜಾಣ್ಮೆ ಪ್ರದರ್ಶಿಸಿ ಆತನನ್ನು ಹಿಡಿದಿದ್ದಾರೆ. ಅದು ಹೇಗೆ ಅಂತ ಮುಂದೆ ಓದಿ.

ಧಾರವಾಡದ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2021ರಲ್ಲಿ ವಿಜಯ್ ಉಣಕಲ್ ಎಂಬಾದ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಆ ಬಳಿಕ ಜಾಮೀನು ಪಡೆದು ಹೊರಗಿದ್ದನು. ಆದರೇ ನಿರಂತರವಾಗಿ ಕೋರ್ಟ್ ಗೆ ಹಾಜರಾಗದ ಕಾರಣ ವಿಜಯ್ ಉಣಕಲ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಲಾಗಿತ್ತು.

ಕೋರ್ಟ್ ಆದೇಶದಿಂದಾಗಿ ವಿಜಯ್ ಉಣಕಲ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆಯ ಬಳಿಕ ಕೋರ್ಟ್ ವಿಜಯ್ ಉಣಕಲ್ ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಹೀಗಾಗಿ ಆರೋಪಿಯನ್ನು ಜೈಲಿಗೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಕರೆದೊಯ್ಯುತ್ತಿದ್ದಾಗ ಕುಮಾರೇಶ್ವರ ಬಡಾವಣೆಯ ಬಳಿಯಲ್ಲಿ ತಪ್ಪಿಸಿಕೊಂಡು ಕಟ್ಟಡವೊಂದರ ಮೇಲೆ ಏರಿ ಆತ್ಮಹತ್ಯೆ ಧಮ್ಕಿ ಹಾಕಿದ್ದನು.

ಆರೋಪಿ ವಿಜಯ್ ಉಣಕಲ್ ತಾನು ಜಡ್ಜ್ ಬರೋವರೆಗೂ ಕೆಳಗೆ ಇಳಿಯೋದಿಲ್ಲ. ಅವರ ಜೊತೆಗೆ ಮಾತನಾಡಿದಾಗಲೇ ಕೆಳಗೆ ಇಳಿಯುತ್ತೇನೆ. ಇಲ್ಲದೇ ಇದ್ದರೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೈಡ್ರಮಾವನ್ನೇ ಮಾಡಿದ್ದನು. ಈ ಹಿನ್ನಲೆಯಲ್ಲಿ ಪೊಲೀಸರು ಮಸ್ತ್ ಪ್ಲಾನ್ ಮಾಡಿದ್ದರು.

ಪೊಲೀಸರಿಂದ ತಪ್ಪಿಸಿಕೊಂಡು ಆತ್ಮಹತ್ಯೆ ಧಮ್ಕಿ ಹಾಕಿದ್ದಂತ ಆರೋಪಿ ವಿಜಯ್ ಉಣಕಲ್ ಬಂಧಿಸೋದಕ್ಕೆ ಅಲ್ಲೇ ಇದ್ದಂತ ಉಪನ್ಯಾಸಕ ಚಿಂತಾಮಣಿ ಎಂಬುವರಿಗೆ ಕೋಟ್ ಹಾಕಿಸಿ, ಇವರೇ ನ್ಯಾಯಾಧೀಶರು ಎಂಬುದಾಗಿ ತೋರಿಸಿ ಮಾತನಾಡಲು ಸೂಚಿಸಿದರು.

ಆರೋಪಿ ವಿಜಯ್ ಉಣಕಲ್ ಅವರು ಜಡ್ಜ್ ಎಂಬುದಾಗಿ ನಂಬಿ ಮಾತನಾಡುತ್ತಿದ್ದಂತ ವೇಳೆಯಲ್ಲಿ ಹಿಂದಿನಿಂದ ತೆರಳಿದಂತ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಆರೋಪಿಯನ್ನು ಮರಳಿ ಹಿಡಿದು ಜಾಣ್ಮೆ ಪ್ರದರ್ಶಿಸಿದ್ದಾರೆ. ಈಗ ಸೆಂಟ್ರಲ್ ಜೈಲಿಗೆ ಆರೋಪಿಯನ್ನು ಧಾರವಾಡ ಉಪನಗರ ಠಾಣೆಯ ಪೊಲೀಸರು ಕರೆದೊಯ್ಯುತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

ನಿಮ್ಮ ಮನೆಗೆ ಸೌಂದರ್ಯ, ಅದೃಷ್ಟವನ್ನು ತರುವ ಸುಂದರವಾದ ಸಸ್ಯಗಳು ಇಲ್ಲಿವೆ !

23/03/2026 9:32 AM1 Min Read

ALERT : ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

23/03/2026 9:04 AM2 Mins Read

SHOCKING : ರಾಜ್ಯದಲ್ಲಿ ಕಳೆದ 4 ವರ್ಷದಲ್ಲಿ 2072 ಅತ್ಯಾಚಾರ, 18,834 ಲೈಂಗಿಕ ಕಿರುಕುಳ ಕೇಸ್ ದಾಖಲು !

23/03/2026 8:40 AM1 Min Read
Recent News

ನಿಮ್ಮ ಮನೆಗೆ ಸೌಂದರ್ಯ, ಅದೃಷ್ಟವನ್ನು ತರುವ ಸುಂದರವಾದ ಸಸ್ಯಗಳು ಇಲ್ಲಿವೆ !

23/03/2026 9:32 AM

ಅಡುಗೆ ಅನಿಲಕ್ಕೆ ಪರ್ಯಾಯವಾದ ಹೊಸ `DME ಗ್ಯಾಸ್’ ಕಂಡುಹಿಡಿದ ಪುಣೆ ವಿಜ್ಞಾನಿಗಳು!

23/03/2026 9:13 AM

ವಾಟ್ಸಾಪ್‌ನಲ್ಲಿ ಬರಲಿದೆ ‘ಮ್ಯಾಜಿಕ್’ ಫೀಚರ್: ಓದಿದ 15 ನಿಮಿಷದಲ್ಲೇ ಮಾಯವಾಗಲಿವೆ ಸಂದೇಶಗಳು!

23/03/2026 9:13 AM

ALERT : ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

23/03/2026 9:04 AM
State News
KARNATAKA

ನಿಮ್ಮ ಮನೆಗೆ ಸೌಂದರ್ಯ, ಅದೃಷ್ಟವನ್ನು ತರುವ ಸುಂದರವಾದ ಸಸ್ಯಗಳು ಇಲ್ಲಿವೆ !

By kannadanewsnow5723/03/2026 9:32 AM KARNATAKA 1 Min Read

ನಮ್ಮ ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಧನಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ತರುವ ಕೆಲವು ವಿಶೇಷ ಗಿಡಗಳ ಬಗ್ಗೆ ನಿಮಗೆ…

ALERT : ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

23/03/2026 9:04 AM

SHOCKING : ರಾಜ್ಯದಲ್ಲಿ ಕಳೆದ 4 ವರ್ಷದಲ್ಲಿ 2072 ಅತ್ಯಾಚಾರ, 18,834 ಲೈಂಗಿಕ ಕಿರುಕುಳ ಕೇಸ್ ದಾಖಲು !

23/03/2026 8:40 AM

ಅತ್ಯಾಚಾರ ಸಂತ್ರಸ್ತೆಯ 34 ವಾರಗಳ `ಭ್ರೂಣ ಗರ್ಭಪಾತ’ಕ್ಕೆ ಕರ್ನಾಟಕ ಹೈಕೋರ್ಟ್ ನಕಾರ !

23/03/2026 8:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.