ಧಾರವಾಡ : ಖಲೀಮಾ ಅನೋಬ್ಬ ಮದುವೆ ಮಂಟಪಕೆ ನುಗ್ಗಿ ಸುಮಾರು 35 ಲಕ್ಷಕ್ಕೂ ಹೆಚ್ಚು ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.ಮದುವೆ ಮಂಟಪದಲ್ಲಿ 35 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿ ಕಳ್ಳ ಪರಾರಿಯಾಗಿದ್ದಾನೆ.
‘ಜೋಶ್ ನಲ್ಲಿ ಜಿಂದಾಬಾದ್ ಎಂದಿದ್ದು ನಿಜ, ಆದರೆ ‘ಪಾಕಿಸ್ತಾನ’ ಪರ ಘೋಷಣೆ ಕೂಗಿಲ್ಲ’ : ಬಂಧಿತ ನಾಶಿಪುಡಿ ಹೇಳಿಕೆ
ನಿನ್ನೆ ಧಾರವಾಡದ ಸ್ಟಾರ್ ಹೋಟೆಲ್ನ ಮಂಟಪದಲ್ಲಿ ನಡೆದ ಘಟನೆಯಾಗಿದೆ. ದಿ ಓಸಿಯನ್ ಹೋಟೆಲ್ ನಲ್ಲಿ ನಿನ್ನೆ ಮದುವೆ ಸಮಾರಂಭ ನಡೆದಿತ್ತು. ಧಾರವಾಡದ ಗಂಗಾಧರಪ್ಪ ಪಟ್ಟಣಶೆಟ್ಟಿ ಕುಟುಂಬದ ವಿವಾಹ ನಡೆದಿತ್ತು. ಗಂಗಾಧರಪ್ಪ ಪಟ್ಟಣಶೆಟ್ಟಿ ಪುತ್ರ ಶರಣಪ್ಪ ಅವರ ಜೊತೆಗೆ ಹುಬ್ಬಳ್ಳಿಯ ಅರುಣ್ ಕುಮಾರ್ ಪುತ್ರಿ ಡಾ. ಪೂಜಾ ಜೊತೆ ವಿವಾಹ ನಡೆದಿತ್ತು.
ಡಿಜಿಟಲ್ ದಾಖಲೆಗಳಲ್ಲಿ ಅರ್ಜಿದಾರರ ಹೆಸರನ್ನು ಮರೆಮಾಚಲು ಹೈಕೋರ್ಟ್ ಸೂಚನೆ
ಈ ವೇಳೆ ಎಲ್ಲರೂ ಊಟಕ್ಕೆ ಕುಳಿತಾಗ ಇದೆ ಸಮಯವನ್ನು ನೋಡಿಕೊಂಡು ಖದೀಮ ಒಬ್ಬ ಚಿನ್ನಾಭರಣ ಎಗರಿಸಿದ್ದಾನೆ. ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.ಇದೀಗ ಕಳ್ಳನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಈ ರಾಶಿಯ ಪುರುಷರಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರಂತೆ ನಿಮ್ಮ ರಾಶಿ ಇದೆಯಾ ನೋಡಿ