ಬೆಂಗಳೂರು : ಧರ್ಮಸ್ಥಳ ಠಾಣೆ ಪಿಎಸ್ಐ ಕಿಶೋರ್ ಕುಟುಂಬದ ವಿರುದ್ಧ ಪತ್ನಿ ವರ್ಷಾ ಇದೀಗ ವರದಕ್ಷಿಣೆ ಕಿರುಕುಳ ಕುರಿತು ಗಂಭೀರ ಆರೋಪ ಮಾಡಿದ್ದು, ಧರ್ಮಸ್ಥಳ ಠಾಣೆ ಪಿಎಸ್ಐ ಕಿಶೋರ್ ಪತ್ನಿ ವರ್ಷ ಈ ಕುರಿತು ಹೇಳಿಕೆ ನೀಡಿದ್ದಾರೆ. ಪತಿ ಕಿಶೋರ್, ಅತ್ತೆ, ಮಾವ ಮತ್ತು ಮೈದುನ ಮನಸೋ ಇಚ್ಛೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಿಶ್ಚಿತಾರ್ಥ ಆದಾಗಿನಿಂದಲೂ ಹಣಕ್ಕೆ ಬೇಡಿಕೆ ಇಡುತ್ತಿದ್ದರು.
ನಾನು ಒಬ್ಬಳೇ ಮಗಳೆಂದು ನನ್ನ ಅಪ್ಪ ಅಮ್ಮ ಸಾಕಷ್ಟು ಹಣ ನೀಡಿದ್ದರು. ಅಪ್ಪ ಅಮ್ಮನ ಮರ್ಯಾದೆ ಹೆದರಿ ಒಂದು ವರ್ಷದಿಂದ ಎಲ್ಲಾ ವನ್ನು ಸಹಿಸಿಕೊಂಡಿದ್ದೆ ಮನೆಯ ಕೊಠಡಿಯಲ್ಲಿ ಕೂಡಿಹಾಕಿ ಲಟ್ಟಣಿಗೆಯಿಂದ ಹಲ್ಲೆ ಮಾಡಿದ್ದರು. ದಿಂಬಿನಿಂದ ಉಸಿರುಗುಟ್ಟಿಸಿ ನನ್ನನ್ನು ಕೊಲೆಗೈಯಲು ಪ್ರಯತ್ನಿಸಿದ್ದರು.ಜೀವ ಉಳಿಸಿಕೊಳ್ಳುವ ಸಲುವಾಗಿ ನಾನು ಪೋಷಕರಿಗೆ ವಿಷಯ ತಿಳಿಸಿದ್ದೆ.
ಅನಂತರ ಧರ್ಮಸ್ಥಳದಿಂದ ಬೆಂಗಳೂರಿಗೆ ಬಂದು ದೂರು ನೀಡಿದ್ದೇನೆ. ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ದೇಹದ ಹಲವು ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಪದೇ ಪದೇ ಹಣ ತಂದು ಕೊಡುವಂತೆ ಪೀಡಿಸುತ್ತಿದ್ದರು ಎಂದು ಧರ್ಮಸ್ಥಳದ ಪಿಎಸ್ಐ ಕಿಶೋರ್ ಕುಮಾರ್ ವಿರುದ್ಧ ಪತ್ನಿ ವರ್ಷ ಗಂಭೀರ ಆರೋಪ ಮಾಡಿದ್ದಾರೆ.