ದಕ್ಷಿಣಕನ್ನಡ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಿನ್ನೆ ಬಂಗ್ಲೆ ಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ನಡೆಸುವ ವೇಳೆ 7 ಮಾನವನ ತಲೆ ಬುರುಡೆಗಳು ಸೇರಿದಂತೆ ಅಸ್ತಿಪಂಜರದ ಮೂಳೆಗಳು ದೊರೆತಿದ್ದವು. ಇವೆಲ್ಲವನ್ನು ಇದೀಗ ಎಸ್ಐಟಿ ಅಧಿಕಾರಿಗಳು FSL ಗೆ ಕಳುಹಿಸಿದ್ದಾರೆ.
ಅಲ್ಲದೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ಮತ್ತಷ್ಟು ಚುರುಕಾಗಿದ್ದು, ಬಂಗ್ಲೆಗುಡ್ಡ ಪ್ರದೇಶಗಳಲ್ಲಿ ನಿನ್ನೆ 7 ಸ್ಥಳಗಳಲ್ಲಿ 7 ತಲೆ ಬುರುಡೆಗಳು ಪತ್ತೆಯಾಗಿವೆ. ಇದೀಗ ವೈದ್ಯರು ತಲೆ ಬುರುಡೆಗಳು ಎಲ್ಲಾ ಪುರುಷರದ್ದು ಅಂತ ಹೇಳುತ್ತಿದ್ದಾರೆ ಮೇಲ್ನೋಟಕ್ಕೆ ಇದು ಪುರುಷರ ಬುರುಡೆಗಳು ಅಂತ ಹೇಳಿದ್ದಾರೆ ಮಹಜರು ವೇಳೆ ಎಸ್ಐಟಿ ತಂಡದಲ್ಲಿ ಬುರುಡೆ ಬಗ್ಗೆ ಸದ್ಯ ಪ್ರಾಥಮಿಕವಾಗಿ ಹೇಳಿಕೆ ನೀಡಿದ್ದಾರೆ ಆದರೆ ಎಲ್ಲವೂ ಎಫ್ ಎಸ್ ಎಲ್ ವರದಿಯಿಂದಲೇ ಬಯಲಾಗಬೇಕಾಗಿದೆ.
ಇನ್ನು ನಿನ್ನೆ ಎಸ್ಐಟಿ ಅಧಿಕಾರಿಗಳು ಬಂಗ್ಲೆ ಗುಡ್ಡದಲ್ಲಿ ತಲೆಬುರುಡೆ ಅಸ್ತಿಪಂಜರದ ಜೊತೆಗೆ ಕೊಡಗು ಜಿಲ್ಲೆಯ ವಿರುದ್ಧ ಯುಬಿ ಅಯ್ಯಪ್ಪ ಅವರ ಐಡಿ ಕಾರ್ಡ್ ಸಿಕ್ಕಿತ್ತು. ಸಿಕ್ಕಿರೋದು ಎನ್ನಲಾಗುತ್ತಿದೆ ತಲೆಬುರುಡೆ ಮತ್ತು ಎಂದು ಹೇಳಲಾಗುತ್ತಿದೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅವಶೇಷ ಪತ್ತೆಯಾಗಿದೆ ಹಗ್ಗ ಬಟ್ಟೆ ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿ ಅವರ ಅವಶೇಷ ಪತ್ತೆಯಾಗಿದೆ. ಇದು ಕೂಡ ಎಫ್ಎಸ್ಎಲ್ ವರದಿಯಲ್ಲಿ ಅಂತಿಮವಾಗಿ ಬಯಲಾಗಬೇಕಾಗಿದೆ.