ಧರ್ಮಸ್ಥಳ: ಇಂದು ಎಸ್ಐಟಿಯಿಂದ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. 13ನೇ ಪಾಯಿಂಟ್ ನಲ್ಲಿ ಅಗೆಯುವ ಕಾರ್ಯ ಆರಂಭಿಸಲಾಗಿದೆ. ಈ ಸ್ಥಳಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ಭೇಟಿ ನೀಡಿದೆ.
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟಿದ್ದಾಗಿ ದೂರುದಾರ ತಪ್ಪೊಪ್ಪಿಗೆ ಸಂಬಂಧಿಸಿದಂತೆ ಹೂತು ಹಾಕಲಾಗಿರುವಂತ ಶವಗಳ ಅಸ್ಥಿಪಂಜರಗಳಿಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇಂದು 13ನೇ ಪಾಯಿಂಟ್ ನಲ್ಲಿ ಹಿಟಾಚಿ ಬಳಸಿ ನೆಲವನ್ನು ಅಗೆಯುವ ಕಾರ್ಯವನ್ನು ಆರಂಭಿಸಲಾಗಿದೆ.
ಇದಕ್ಕೂ ಮುನ್ನ 13ನೇ ಪಾಯಿಂಟ್ ಜಾಗದಲ್ಲಿ ಎಸ್ಐಟಿಯಿಂದ ಜಿಪಿಆರ್ ಯಂತ್ರ ಬಳಸಿ ಸ್ಕ್ಯಾನ್ ಮಾಡಲಾಗಿತ್ತು. ಈ ವೇಳೆ ಅಸ್ಥಿ ಪಂಜರದ ಕುರುಹು ಪತ್ತೆಯಾಗಿವೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಈಗ 13ನೇ ಪಾಯಿಂಟ್ ನಲ್ಲಿ ಅಸ್ಥಿ ಪಂಜರಗಳಿಗಾಗಿ ಎರಡು ಇಟಾಚಿ ಬಳಸಿಕೊಂಡು ಅಗೆಯುವಂತ ಕಾರ್ಯವನ್ನು ಮಾಡಲಾಗುತ್ತಿದೆ.
ಒಂದೆಡೆ ಎಸ್ಐಟಿಯಿಂದ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರೇ, ಮತ್ತೊಂದೆಡೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಕೂಡ 13ನೇ ಪಾಯಿಂಟ್ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಆಧಾರ್ ಕಾರ್ಡ್ ಅನ್ನು ‘ಪೌರತ್ವ ಪುರಾವೆ’ಯಾಗಿ ಸ್ವೀಕರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು