ಬೆಂಗಳೂರು : ಧರ್ಮಸ್ಥಳ ಪ್ರಕರಣದಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎಂಬ ಆರೋಪಕ್ಕೆ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಆರೋಪಕ್ಕೆ ಸಸಿಕಾಂತ್ ಸೆಂಥಿಲ್ ತಿರುಗೇಟು ನೀಡಿದ್ದಾರೆ.ಚೈಲ್ಡಿಶ್ ಗಳಿಗೆ ಉತ್ತರ ಕೊಡಬೇಕಾ ಅಂತ ಇಷ್ಟು ದಿನ ಸುಮ್ಮನಿದ್ದೆ . ಆದರೆ ಈಗ ಪ್ರತಿದಿನ ಒಂದು ಸ್ಟೋರಿ ಬರುತ್ತಿದೆ ಇದು ಸರಿಯಾದ ಸಮಯವೆಂದು ಮಾನನಷ್ಟ ಕೇಸ್ ದಾಖಲಿಸುತ್ತೇನೆ ಎಂದು ಆಕ್ರೋಶ ಹೊರಹಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು 10 ವರ್ಷಗಳ ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಆರೋಪ ಮಾಡಿದ ವ್ಯಕ್ತಿ ಯಾರು ಗೊತ್ತಾ? ಕರ್ನಾಟಕದ ಸಂಪತ್ತು ಲೂಟಿ ಹೊಡೆದು 7 ವರ್ಷ ಜೈಲಿನಲ್ಲಿ ಇದ್ದವರು. ದೇಶದಲ್ಲಿ ರಾಜ್ಯದ ಮರ್ಯಾದೆ ಹರಾಜು ಹಾಕಿದವರು. ನನಗೆ ದೆಹಲಿಯಲ್ಲಿ ಮನೆಯಲ್ಲಿ ಇಲ್ಲ ದೆಹಲಿಗೆ ತಲೆ ಬುರುಡೆ ತೆಗೆದುಕೊಂಡು ಹೋಗಿದ್ದೇನೆ ಅಂತಾರೆ. ತಲೆಬುರುಡೆಯಲ್ಲಿ ಸಿಗುತ್ತೆ ಅಂತಾನೆ ಗೊತ್ತಿಲ್ಲ ಬಹುಶಃ ಅದು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿಗೆ ಗೊತ್ತಿರಬೇಕು. ಸಿಟಿ ಸಿವಿಲ್ ಕೋರ್ಟ್ ಬಳಿ ಸಂಸದ ಶಶಿಕಾಂತ್ ಸೆಂಥಿಲ್ ವಾಗ್ದಾಳಿ ನಡೆಸಿದರು.