ಉಡುಪಿ: ಉಡುಪಿಯಲ್ಲೂ ಧರ್ಮ ದಂಗಲ್ ಮತ್ತೆ ಶುರುವಾಗಿದೆ. ಇದೀಗ ಜಾತ್ರಾ ಮಹೋತ್ಸವಗಳು ಆರಂಭವಾಗುತ್ತಿದ್ದಂತೆ ಹಿಂದೂ ಹೊರತುಪಡಿಸಿ ಅನ್ಯಮತೀಯರಿಗೆ ವ್ಯಾಪಾರ ಬಹಿಷ್ಕಾರ ಮಾಡಲಾಗಿದೆ.
BREAKING NEWS : ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ : ಬೈಕ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು
ದೇವಸ್ಥಾನದ ಆವರಣಗಳಲ್ಲಿ ಅನ್ಯಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ಬೇಡವೆಂದು ಹಿಂದೂ ಸಂಘಟನೆಗಳು ಒತ್ತಾಯಿಸಿದೆ.
ಕರಾವಳಿಯಲ್ಲಿ ಡಿಸೆಂಬರ್ 8 ರಂದು ಕೋಟೇಶ್ವರದ ಕೊಡಿ ಹಬ್ಬ ನಡೆಯಲಿದೆ. ಆದರೆ ಇದರಲ್ಲಿ ಅನ್ಯಧರ್ಮಿಯ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಆಗ್ರಹಿಸಿದೆ.ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆ ಡಿ. 9, 10, 11 ರಂದು ನೆರೆವೇರಲಿದೆ. ದೇವಸ್ಥಾನ ಆವರಣದಲ್ಲಿ ಅನ್ಯಧರ್ಮಿಯ ವ್ಯಾಪಾರಕ್ಕೆ ಅವಕಾಶವಿಲ್ಲ. ಆಡಳಿತಾಧಿಕಾರಿಯಿಂದ ಈ ಬಗ್ಗೆ ಸಹಾಯಕ ಕಮಿಷನರರಿಗೆ ನಿರ್ಣಯ ರವಾನೆಯಾಗಿದೆ. ಬಜರಂಗ ದಳ, ವಿಹಿಂಪ ಒತ್ತಾಯದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.