ಬೆಂಗಳೂರು: ಕುಕ್ಕೆ ಸುಬ್ರಮಣ್ಯದ ಬಳಿಕ ಬಳಿಕ ಬೆಂಗಳೂರಿನಲ್ಲೂ ಧರ್ಮ ದಂಗಲ್ ಬಿಸಿ ತಟ್ಟಿದೆ. ಬೆಂಗಳೂರಿನಲ್ಲಿ ಕೂಡ ಹಿಂದೂಯೇತರ ವ್ಯಾಪಾರಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಸಲ್ಲಿಸಲಾಗಿದೆ.
ಹೌದು, ನಗರದ ವಿವಿ ಪುರಂನಲ್ಲಿರುವಂತ ಸುಬ್ರಹ್ಮಣ್ಯ ದೇಗುಲದ ಜಾತ್ರೆಯನ್ನು ಕೋವಿಡ್ ಕಡಿಮೆಯಾದ ಬಳಿ, ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಹಿಂದುಯೇತರರ ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿಹೆಚ್ ಪಿ ಮನವಿ ಮಾಡಿದೆ.
ಈ ಸಂಬಂಧ ವಿಹೆಚ್ ಪಿ ಹಾಗೂ ಬಜರಂಗ ದಳದಿಂದ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ದಕ್ಷಿಣ ಡಿಸಿಪಿ ಕೃಷ್ಣಕಾಂತ್ ಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ನವೆಂಬರ್ 29ರಂದು ವಿವಿ ಪುರಂನಲ್ಲಿ ಸುಬ್ರಹ್ಮಣ್ಯ ದೇಗುಲ ಜಾತ್ರೆಯನ್ನು ನಡೆಸಲಾಗುತ್ತಿದೆ. ಈ ಜಾತ್ರೆಯಲ್ಲಿ ಹಿಂದೂಗಳನ್ನು ಬಿಟ್ಟು ಬೇರೆಯ ಯಾರಿಗೂ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮನವಿ ಮಾಡಲಾಗಿದೆ. ಈ ಮೂಲಕ ಹಿಂದೂಯೇತರರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಕೋರಿದೆ.
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಗ್ರಾಮ ಕಾಯಕ ಮಿತ್ರ ಹುದ್ದೆಗಳಿಗೆ ಅರ್ಜಿ ಆಹ್ವಾನ
BIGG NEWS : ಪಿಂಚಣಿದಾರರಿಗೆ ಗುಡ್ ನ್ಯೂಸ್ : ಅಂಚೆ ಮೂಲಕ ಮನೆ ಬಾಗಿಲಿಗೇ ಬರಲಿದೆ `ಜೀವನ ಪ್ರಮಾಣ ಪತ್ರ’