ಬೆಂಗಳೂರು: ರಾಜ್ಯದ ದೇಗುಲಗಳಲ್ಲಿ ಮೊದಲಿನಿಂದಲೂ ಪರಿಶುದ್ಧ ಪ್ರಸಾದವನ್ನು ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಯಾವುದೇ ಭಕ್ತಾಧಿಗಳಿಗೆ ಸ್ವೀಕರಿಸಲು ಆತಂಕ ಬೇಡ ಎಂಬುದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ, ಅನ್ನದಾಸೋಹದ ವ್ಯವಸ್ಥೆಯಿದ್ದು, ಶುದ್ಧ ತುಪ್ಪವನ್ನೇ ಬಳಸಲಾಗುತ್ತಿದೆ. ಹೀಗಾಗಿ ಭಕ್ತರು ಪ್ರಸಾದ ಸ್ವೀಕರಿಸಲು ಯಾವುದೇ ಆತಂಕಪಡಬೇಕಿಲ್ಲ ಎಂದು ಹೇಳಿದ್ದಾರೆ.
ಅದಾಗ್ಯೂ ನಾವು ಈ ಬಗ್ಗೆ ಎಲ್ಲ ದೇವಾಲಯಗಳಿಗೆ ಮತ್ತೊಮ್ಮೆ ಸೂಚನೆ ನೀಡಿದ್ದೇವೆ. ಪ್ರಸಾದ ತಯಾರಿಕೆ, ವಿತರಣೆಯಲ್ಲಿ ಶುಚಿತ್ವ ಕಾಪಾಡಬೇಕು. ಗುಣಮಟ್ಟದ ನಂದಿನಿ ತುಪ್ಪವನ್ನೇ ಬಳಸಬೇಕು ಎಂದು ತಿಳಿಸಿದ್ದೇವೆ ಎಂದು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ, ಅನ್ನದಾಸೋಹದ ವ್ಯವಸ್ಥೆಯಿದ್ದು, ಶುದ್ಧ ತುಪ್ಪವನ್ನೇ ಬಳಸಲಾಗುತ್ತಿದೆ. ಹೀಗಾಗಿ ಭಕ್ತರು ಪ್ರಸಾದ ಸ್ವೀಕರಿಸಲು ಯಾವುದೇ ಆತಂಕಪಡಬೇಕಿಲ್ಲ. ಅದಾಗ್ಯೂ ನಾವು ಈ ಬಗ್ಗೆ ಎಲ್ಲ ದೇವಾಲಯಗಳಿಗೆ ಮತ್ತೊಮ್ಮೆ ಸೂಚನೆ ನೀಡಿದ್ದೇವೆ. ಪ್ರಸಾದ ತಯಾರಿಕೆ, ವಿತರಣೆಯಲ್ಲಿ ಶುಚಿತ್ವ ಕಾಪಾಡಬೇಕು.… pic.twitter.com/PMASYRddNW
— DIPR Karnataka (@KarnatakaVarthe) September 21, 2024
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ‘ಸ್ಥಾಯಿ ಸಮಿತಿ’ಗಳಿಗೆ ಚುನಾವಣೆಗೆ ಮಹೂರ್ತ ಫಿಕ್ಸ್
ಬೆಂಗಳೂರಲ್ಲಿ ಹೆಚ್ಚಿದ ‘ನಿಫಾ’ ಭೀತಿ : ಓರ್ವ ವ್ಯಕ್ತಿಗೆ ಸೊಂಕಿನ ಗುಣಲಕ್ಷಣ ಪತ್ತೆ, 41 ಜನರಿಗೆ ‘ಹೋಮ್ ಕ್ವಾರಂಟೈನ್’!