ಬೆಂಗಳೂರು : ನಾಳೆ ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ ನಾಳೆ ಬೆಂಗಳೂರಿನ ಬಹುತೇಕ ದೇವಾಲಯಗಳು ಬಂದ್ ಆಗಿರಲಿವೆ. ನಾಳೆ ಬೆಳಿಗ್ಗೆಯಿಂದ ಗವಿ ಗಂಗಾಧರೇಶ್ವರ ದೇವಸ್ಥಾನ ಕ್ಲೋಸ್ ಆಗಿರಲಿದೆ. ಶಿವನಿಗೆ ಅಭಿಷೇಕ ಮಾಡಿ ಬೆಳಗ್ಗೆ 11 ಗಂಟೆಗೆ ದೇವಸ್ಥಾನ ಬಂದ್ ಮಾಡಲಾಗುತ್ತದೆ.
ನಾಡಿದ್ದು ಅಂದರೆ ಸೋಮವಾರ ಮುಂಜಾನೆ ಶುದ್ಧೀಕಾರದ ಬಳಿಕ ದೇವಸ್ಥಾನ ತೆರೆಯಲಿದೆ.ನಾಳೆ ರಾತ್ರಿ 9:57 ರಿಂದ 1: 26ರವರೆಗೆ ಚಂದ್ರ ಗ್ರಹಣ ಸಂಭವಿಸಲಿದೆ. ಸುಮಾರು 3 ಗಂಟೆ 29 ನಿಮಿಷದವರೆಗೂ ಈ ಒಂದು ಖಗ್ರಾಸ ಚಂದ್ರ ಗ್ರಹಣ ಸಂಭವಿಸಲಿದೆ. ಈ ನೆಲೆಯಲ್ಲಿ ನಾಳೆ ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನ ಸೇರಿದಂತೆ ಬಹುತೇಕ ದೇವಾಲಯಗಳು ಬಂದ್ ಆಗಿರಲಿವೆ.