ಮೈಸೂರು: ಮೈಸೂರು ನಾಡದೇವತೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಭಕ್ತಾಧಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಸಾರ್ವಜನಿಕರು ಅಭಿಯಾನ ಪ್ರಾರಂಭಿಸಿದ್ದಾರೆ.
BIGG NEWS: ಸುರತ್ಕಲ್ನಲ್ಲಿ ಜಲೀಲ್ ಹತ್ಯೆ ಪ್ರಕರಣ; ನಿಷೇದಾಜ್ಞೆ ಡಿ. 29ರವರೆಗೆ ವಿಸ್ತರಣೆ
ಈ ಅಭಿಯಾನಕ್ಕೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಬೆಂಬಲ ಸೂಚಿಸಿದ್ದಾರೆ.ಕಳೆದ ಹಿಂದೆ ಮುರುಡೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ನೀತಿ ಜಾರಿಗೊಳಿಸುವಂತೆ ಹಿಂದೂ ಪರ ಸಂಘಟನೆಗಳು ಮನವಿ ಮಾಡಿದ್ದರು. ಇದೀಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಉಡುಗೆಯಲ್ಲಿ ಬರುವಂತೆ ಸೂಚನೆ ನೀಡಿದ್ದಾರೆ.
BIGG NEWS: ಸುರತ್ಕಲ್ನಲ್ಲಿ ಜಲೀಲ್ ಹತ್ಯೆ ಪ್ರಕರಣ; ನಿಷೇದಾಜ್ಞೆ ಡಿ. 29ರವರೆಗೆ ವಿಸ್ತರಣೆ
ಈ ಕುರಿತು ಮಾತನಾಡಿದ ಪ್ರತಾಪ್ ಸಿಂಹ ,ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ನಿಗದಿ ಮಾಡುವ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೂ ತಂದಿದ್ದರು. ಕೆಲವು ವೇಳೆ ಬೆಟ್ಟಕ್ಕೆ ಬರುವವರು ಬೇರೆ ಬೇರೆ ವಸ್ತ್ರಗಳನ್ನು ಧರಿಸಿ ಬರುವುದನ್ನು ನೋಡಿದ್ದೇವೆ. ಕೇರಳದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಪುರುಷ ಹಾಗೂ ಮಹಿಳಾ ಭಕ್ತರಿಗೆ ನಿಗದಿತ ಡ್ರೆಸ್ ಕೊಡ್ ಕಡ್ಡಾಯಗೊಳಿಸಲಾಗಿದೆ ಎಂದರು.