ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ಬೆಟ್ಟ ಹತ್ತಿದ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. 3800 ಅಡಿ ಬೆಟ್ಟ ಏರಿ ಹರಕೆ ಸಲ್ಲಿಸಿದ ಭಕ್ತರು ಪುನೀತರಾಗಿದ್ದಾರೆ.
ಹರಕೆ ಹೊತ್ತವರು ಉಪವಾಸವಿದ್ದೇ ಬೆಟ್ಟ ಏರಿದರು. ತಾಯಿಯ ದರ್ಶನ ಪಡೆದು ಆಹಾರ ಸೇವಿಸಿದರು. ರಾಜ್ಯದ ನಾನಾ ಮೂಲೆಗಳಿಂದ ಬಂದ ಭಕ್ತರು ನಿನ್ನೆಯಿಂದ ಕಲ್ಲು ಮುಳ್ಳು ಲೆಕ್ಕಿಸದೇ ಬೆಟ್ಟವನ್ನೇರಿ ಇಂದು ದೇವಿ ದರ್ಶನ ಪಡೆದಿದ್ದಾರೆ. ಚಪ್ಪಲಿ ಇಲ್ಲದೇ ಒಂದೂವರೇ ಲಕ್ಷಕ್ಕೂ ಹೆಚ್ಚು ಭಕ್ತರು ತಾಯಿ ದರ್ಶನ ಪಡೆದಿದ್ದಾರೆ . ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಬಿಂಡಿಗಾ ದೇವಿರಮ್ಮಗೆ ಉಘೇ ಎಂದು ಕೈಮುಗಿದರು.
ಸುಮಾರು 3800 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿ ನೆಲೆಸಿರೋ ಆ ದೇವಿಯನ್ನ ನೋಡಲು ಜನಸಾಗರವೇ ಹರಿದು ಬಂದಿದೆ.. ಇಂದಿನಿಂದ 4 ದಿನಗಳ ಕಾಲ ನಡೆಯೋ ಜಾತ್ರೆಗೆ ರಾಜ್ಯ, ಹೊರರಾಜ್ಯದಿಂದಲೂ ಆಗಮಿಸಿದ ಭಕ್ತರು, ಪೂಜಾ-ಕೈಂಕರ್ಯಗಳಲ್ಲಿ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗ್ತಿದ್ದಾರೆ.
ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವಿಯನ್ನ ನೋಡಲು ನಿನ್ನೆ (ಭಾನುವಾರ) ಮಧ್ಯರಾತ್ರಿಯಿಂದಲೇ ಸಾವಿರಾರು ಜನ ಬೆಟ್ಟ ಹತ್ತಿದ್ದರು. ಭಕ್ತರು ಇಂದು ಸೋಮವಾರ ಬೆಳಗಿನ ಜಾವದ ಹೊತ್ತಿಗೆ ಗುಡ್ಡದ ತುದಿಯಲ್ಲಿ ತಲುಪಿದ್ದಾರೆ. ಈ ಬೆಟ್ಟ ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಇದೆ ಎನ್ನಲಾಗಿದೆ. ಭಾರೀ ಸಂಖ್ಯೆಯಲ್ಲಿ ಬೆಟ್ಟದಲ್ಲಿರುವ ದೇವಿ ದರ್ಶನ ಪಡೆಯಲು ಜನಸಾಗರವೇ ಹರಿದುಬಂದಿತ್ತು.
ದೀಪಾವಳಿ ಅಮವಾಸ್ಯೆಯ ಹಿಂದಿನ ದಿನ ಬೆಟ್ಟದಲ್ಲಿರೋ ದುರ್ಗೆಗೆ ವಿಶೇಷ ಪೂಜೆ ನಡೆಯಲಿದೆ. ಆ ಪೂಜೆಯನ್ನ ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಬಂದೇ ಬರ್ತಾರೆ. ಇಲ್ಲಿ ಹರಕೆ ಕಟ್ಟಿದ್ರೆ ಆ ಹರಕೆ ಈಡೇರೋದ್ರಲ್ಲಿ ಅನುಮಾನವಿಲ್ಲ ಎಂಬ ನಂಬಿಕೆಯಿದೆ. ಅದಕ್ಕಾಗಿ ಹರಕೆ ಕಟ್ಟಿದ-ಕಟ್ಟದ ಭಕ್ತರು ಪ್ರತಿವರ್ಷ ಇಲ್ಲಿಗೆ ಬರುತ್ತಾರೆ.
‘ಡೋಲು, ನಗಾರಿ ಬಾರಿಸುವುದರಿಂದ ಒಡೆದ ಮನಸುಗಳ ಜೋಡಣೆ ಸಾಧ್ಯವೇ : ‘ಜೋಡೋ’ ಯಾತ್ರೆಗೆ ಸಚಿವ ಸುಧಾಕರ್ ವ್ಯಂಗ್ಯ
WATCH : ದೀಪಾವಳಿ ಆಚರಣೆ ವೇಳೆ ಕಾರ್ಗಿಲ್ ನಲ್ಲಿ ಸೈನಿಕರೊಂದಿಗೆ ಹಾಡೇಳಿ ಸಂಭ್ರಮಿಸಿದ ಪ್ರಧಾನಿ ಮೋದಿ
BIG UPDATE: ದೇವರ ಮೂರ್ತಿಯ ಮೇಲೆ ಕಾಲಿಟ್ಟು ಪೂಜೆ: ತೀವ್ರ ವಿವಾದದ ಬಳಿಕ ಅರ್ಚಕ ಮಹೇಶ್ವರಯ್ಯ ಕ್ಷಮೆಯಾಚನೆ